ಕಲಬುರಗಿ | ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿ ಪ್ರಕಟ; ʼವಾರ್ತಾಭಾರತಿʼಯ ವರದಿಗಾರ ದಸ್ತಗೀರ್ ನದಾಫ್ ಸೇರಿದಂತೆ ಹಲವರಿಗೆ ಪ್ರಶಸ್ತಿ
ವಿ.ಎನ್ ಕಾಗಲಕರ್ ಪ್ರಶಸ್ತಿಗೆ ಹುಣಸಗಿ, ಆವಂಟಿ, ಕವಲಗಾ, ಪ್ರವೀಣರೆಡ್ಡಿ, ಜೋಶಿ ಆಯ್ಕೆ
ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕೊಡಮಾಡುವ ಕಲ್ಯಾಣ ಕರ್ನಾಟಕ ಭಾಗದ ಪ್ರತಿಷ್ಠಿತ ವಿ. ಎನ್. ಕಾಗಲಕರ್ ಪ್ರಶಸ್ತಿಗೆ ಐವರು ಹಿರಿಯ ಪತ್ರಕರ್ತರು ಹಾಗೂ ಎರಡು ವರ್ಷದ ವಾರ್ಷಿಕ ಪ್ರಶಸ್ತಿಗೆ 'ವಾರ್ತಾ ಭಾರತಿಯʼ ದಿನಪತ್ರಿಕೆಯ ಕಲಬುರಗಿ ಜಿಲ್ಲಾ ವರದಿಗಾರ ದಸ್ತಗೀರ ನದಾಫ್ ಯಳಸಂಗಿ ಸೇರಿದಂತೆ 24 ಜನ ಪತ್ರಕರ್ತರನ್ನು ಆಯ್ಕೆ ಮಾಡಲಾಗಿದೆ ಎಂದು ಕಾರ್ಯನಿರತ ಪತ್ರಕರ್ತ ಸಂಘದ ಜಿಲ್ಲಾಧ್ಯಕ್ಷ ಬಾಬುರಾವ ಯಡ್ರಾಮಿ ತಿಳಿಸಿದ್ದಾರೆ.
ಹಿರಿಯ ಪತ್ರಕರ್ತರಾದ ಪ್ರಭಾಕರ ಜೋಶಿ, ಚಂದ್ರಕಾoತ ಹುಣಸಗಿ, ಪ್ರವೀಣರೆಡ್ಡಿ, ದೇವಿಂದ್ರಪ್ಪ ಆವಂಟಿ ಮತ್ತು ಚಂದ್ರಶೇಖರ ಕವಲಗಾ ಅವರನ್ನು ವಿ.ಎನ್.ಕಾಗಲಕರ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಅದೇ ರೀತಿ 2025 ಮತ್ತು 2026ನೇ ಸಾಲಿನ ಎರಡು ವರ್ಷದ ವಾರ್ಷಿಕ ಪ್ರಶಸ್ತಿಗಳಿಗೆ ಹಿರಿಯ ಪತ್ರಕರ್ತರಾದ ಸಂಗಮನಾಥ ರೇವತಗಾಂವ, ಸಂತೋಷ ನಾಡಗೇರಿ, ಸೋಮೇಶಗೌಡ, ಮೋಹಿಜ್ ಪಟೇಲ್, ಮಹಮ್ಮದ್ ಮಶಾಕ್, ಶರಣು ಪೂಜಾರಿ, ಸಂಗಮೇಶ ಹಿರೇಮಠ, ಶಿವಕುಮಾರ ಹಳ್ಳಿಖೇಡ, ಭೀಮಪ್ಪ, ಫಿರೋಜ್ ಅಹ್ಮದ್, ಬ್ರಹ್ಮಾನಂದ ಅರಳಿ, ರಮೇಶ ಮೇಳಕಂದಾ, ಬಾಬುರಾವ ಕೋಬಾಳ, ನಾಗರಾಜ ಗದ್ದಿ, ಶಿವಕುಮಾರ ಕುಸಾಳೆ, ಭೀಮಣ್ಣ ಬಾಲಯ್ಯ, ದತ್ರಾತ್ರೇಯ ಪಾಟೀಲ್, ಮಲ್ಲಿಕಾರ್ಜುನ ಜೋಗ, ಸಾ.ಸಿ.ಬೆನಕನಳ್ಳಿ, ಶರಣು ಮಹಾಗಾಂವ, ವಿಜಯಕುಮಾರ್ ಜಿಡಗಿ, ಮಂಜುನಾಥ ದೊಡ್ಡಮನಿ ಮತ್ತು ಪ್ರಭಾಕರ ಜಂಗಲೆ ಅವರನ್ನು ಆಯ್ಕೆ ಮಾಡಲಾಗಿದೆ.
ವಿ.ಎನ್. ಕಾಗಲಕರ್ ಪ್ರಶಸ್ತಿಯು ಐದು ಸಾವಿರ ನಗದು ಮತ್ತು ಪ್ರಶಸ್ತಿ ಫಲಕ ಒಳಗೊಂಡಿದ್ದು, ವಾರ್ಷಿಕ ಪ್ರಶಸ್ತಿಯು ಸಾವಿರ ರೂ. ನಗದು, ಪ್ರಶಸ್ತಿ ಪತ್ರ ಒಳಗೊಂಡಿದೆ ಎಂದು ಸಂಘದ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ವೇಳೆ ಕಾರ್ಯನಿರತ ಪತ್ರಕರ್ತ ಸಂಘದ ಪ್ರಧಾನ ಕಾರ್ಯದರ್ಶಿ ಭೀಮಾಶಂಕರ ಫಿರೋಜಾಬಾದ್, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ರಾಜಕುಮಾರ ಉದನೂರ್ ಉಪಸ್ಥಿತರಿದ್ದರು.