'ಅಪರೇಷನ್ ಅಭ್ಯಾಸ್' ಅಣಕು ಪ್ರದರ್ಶನ: ಮೇ 19 ರಂದು ಕಲಬುರಗಿ ನಗರದಲ್ಲಿ ಬ್ಲ್ಯಾಕ್ ಔಟ್
Update: 2025-05-16 18:53 IST
ಕಲಬುರಗಿ: "ಅಪರೇಷನ್ ಅಭ್ಯಾಸ್" ನಾಗರಿಕ ರಕ್ಷಣಾ ಕಾರ್ಯಚರಣೆಯ ಅಣುಕು ಪ್ರದರ್ಶನದ ಭಾಗವಾಗಿ ಕೇಂದ್ರ ಸರ್ಕಾರ ಹಾಗೂ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಮೇ 19 ರಂದು ಸೋಮವಾರ ರಾತ್ರಿ 8 ಗಂಟೆಯಿಂದ 8.10 ನಿಮಿಷದವರೆಗೆ (ಹತ್ತು ನಿಮಿಷಗಳ ಕಾಲ) ಕಲಬುರಗಿ ನಗರವನ್ನು ಸಂಪೂರ್ಣವಾಗಿ ಬ್ಲಾಕ್ ಔಟ್ (BLACK OUT) ನ್ನು ಮಾಡಲು ನಿರ್ಧರಿಸಲಾಗಿದೆ.
ಸಾರ್ವಜನಿಕರು ತುರ್ತು ಸೇವೆಗಳನ್ನು ಹೊರತುಪಡಿಸಿ ತಮ್ಮ ಮನೆಯಲ್ಲಿರುವ ಇನ್ವರ್ಟರ್ ಗಳನ್ನು ಸ್ಥಗಿತಗೊಳಿಸಿ ಮಾಕ್ ಡ್ರಿಲ್ ಅನ್ನು ಯಶಸ್ವಿಗೊಳಿಸಲು ಸಹಕರಿಸಬೇಕೆಂದು ಕಲಬುರಗಿ ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು (ವಿ) ಅವರು ತಿಳಿಸಿದ್ದಾರೆ.