ಸೇಡಂ; ಮಳಖೇಡ ಕೋಟೆ ಮೇಲೆ ಕರ್ನಾಟಕ ರಾಜ್ಯೋತ್ಸವ ಆಚರಣೆ
ಸೇಡಂ; ರಾಷ್ಟ್ರಕೂಟರ ಸಾಮ್ರಾಜ್ಯದ ಹೇಮೆಯ ರಾಜ್ಯದಾನಿಯಾಗಿದ ತಾಲೂಕಿನ ಮಳಖೇಡ ಗ್ರಾಮದಲ್ಲಿ ಕೋಟೆ ಆವರಣದಲ್ಲಿ ಕರ್ನಾಟಕ ನವನಿರ್ಮಾಣ ಸೇನೆ ಸಂಘಟನೆ ನೇತೃತ್ವದಲ್ಲಿ 71ನೇ ಕರ್ನಾಟಕ ರಾಜ್ಯೋತ್ಸವ ಆಚರಣೆ ಮಾಡಲಾಯಿತು.
ಕನ್ನಡ ತಾಯಿಯ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಕನ್ನಡದ ಕಹಳೆಯನ್ನು ಕನ್ನಡ ಅಭಿಮಾನಿಗಳು ಮೊಳಗಿಸಿದರು.
ಈ ಸಂದರ್ಭದಲ್ಲಿ, ಮಳಖೇಡ ಗ್ರಾಪಂ ಮಾಜಿ ಅಧ್ಯಕ್ಷ ಚೆನ್ನಯ್ಯ ಪುರಾಣಿಕ, ಕರ್ನಾಟಕ ನವನಿರ್ಮಾಣ ಸೇನೆ ತಾಲೂಕು ಅಧ್ಯಕ್ಷ ಭೀಮಾಶಂಕರ ಕೊರವಿ, ಮಾದೇವಪ್ಪ ಗೋಣಿ, ರಾಮು ಕಣಿಕಲ್, ವಿಜಯ್ ಜಾದವ್, ಶಾಂತು ಕರುಣಾಕರ್, ನಾಗಪ್ಪ ಭಂಡಾರಿ, ಹನುಮಂತ ಭರತನೂರ, ರಾಮು ಮಂಗಾ, ಶ್ರೀಶೈಲ ಪುಜಾರಿ, ನಾಗು, ಕೈಲಾಸ ಪುಜಾರಿ, ಯಲ್ಲಾಲಿಂಗ ಪುಜಾರಿ, ಭೀಮಣ್ಣ ಬಾಗೋಡಿ, ಚಂದ್ರು ಪುಜಾರಿ ಸೇರಿ ಮತ್ತಿತರರು ಇದ್ದರು.