×
Ad

ಡಿಜಿ–ಐಜಿಪಿ ಪ್ರತಿಷ್ಠಿತ ಪ್ರಶಸ್ತಿಗೆ ಕಲಬುರಗಿಯ ಆರು ಪೊಲೀಸ್ ಅಧಿಕಾರಿಗಳು ಆಯ್ಕೆ

Update: 2026-06-23 15:54 IST

ಕಲಬುರಗಿ: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಸೇವೆ, ಕರ್ತವ್ಯನಿಷ್ಠೆ ಹಾಗೂ ಸಾರ್ವಜನಿಕ ಭದ್ರತೆಗೆ ನೀಡಿದ ವಿಶೇಷ ಕೊಡುಗೆಯನ್ನು ಪರಿಗಣಿಸಿ 2025–26ನೇ ಸಾಲಿನ ಪ್ರತಿಷ್ಠಿತ ಡಿಜಿ–ಐಜಿಪಿ ಪ್ರಶಸ್ತಿಗೆ ಕಲಬುರಗಿ ವಲಯದ ಡಿಐಜಿ ಶಾಂತನು ಸಿನ್ಹಾ ಸೇರಿದಂತೆ ಜಿಲ್ಲೆಯ ಆರು ಪೊಲೀಸ್ ಅಧಿಕಾರಿಗಳು ಆಯ್ಕೆಯಾಗಿದ್ದಾರೆ.

ಪ್ರಶಸ್ತಿಗೆ ಭಾಜನರಾದವರಲ್ಲಿ ಕಲಬುರಗಿ ವಲಯದ ಡಿಐಜಿ ಶಾಂತನು ಸಿನ್ಹಾ, ಕಲಬುರಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು, ಕಲಬುರಗಿ ಪೊಲೀಸ್ ಕಮಿಷನರೇಟ್‌ನ ಸಿಸಿಬಿ ಇನ್‌ಸ್ಪೆಕ್ಟರ್ ಅರುಣಕುಮಾರ, ಆಳಂದ ಪೊಲೀಸ್ ಠಾಣೆಯ ಸಿಪಿಐ ಶರಣಬಸಪ್ಪ ಕೊಡ್ಲಾ, ಡಿಎಆರ್‌ನ ಆರ್‌ಪಿಐ ಚಂದ್ರಶೇಖರ ಹಾಗೂ ಈಶಾನ್ಯ ವಲಯ ಪೊಲೀಸ್ ಕಚೇರಿಯ ಹೆಡ್ ಕಾನ್‌ಸ್ಟೆಬಲ್ ಅರುಣಕುಮಾರ ಸೇರಿದ್ದಾರೆ.

2009ರ ಬ್ಯಾಚ್‌ನ ಕರ್ನಾಟಕ ಕೇಡರ್‌ನ ಐಪಿಎಸ್ ಅಧಿಕಾರಿಯಾಗಿರುವ ಶಾಂತನು ಸಿನ್ಹಾ ಅವರು ಪ್ರಸ್ತುತ ಕಲಬುರಗಿ ವಲಯದ ಡಿಐಜಿಯಾಗಿ ಸೇವೆ ಸಲ್ಲಿಸುತ್ತಿದ್ದು, ಇಲಾಖೆಯಲ್ಲಿ ಪರಿಣಾಮಕಾರಿ ಆಡಳಿತ ಹಾಗೂ ನಾಯಕತ್ವಕ್ಕಾಗಿ ಗುರುತಿಸಿಕೊಂಡಿದ್ದಾರೆ.

2017ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ಅಡ್ಡೂರು ಶ್ರೀನಿವಾಸುಲು ಅವರು 2021ರಿಂದ ಕಲಬುರಗಿ ಕಮಿಷನರೇಟ್‌ನಲ್ಲಿ ಡಿಸಿಪಿಯಾಗಿ ಕಾರ್ಯನಿರ್ವಹಿಸಿ, 2023ರಿಂದ ಕಲಬುರಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

2010ರಲ್ಲಿ ಪಿಎಸ್‌ಐ ಆಗಿ ಪೊಲೀಸ್ ಸೇವೆಗೆ ಸೇರ್ಪಡೆಯಾದ ಅರುಣಕುಮಾರ ಅವರು ಪ್ರಸ್ತುತ ಕಲಬುರಗಿ ಸಿಸಿಬಿ ಇನ್‌ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಹಲವು ಮಹತ್ವದ ಪ್ರಕರಣಗಳ ಭೇದನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

2007ರಲ್ಲಿ ಎಸ್‌ಐ ಆಗಿ ಸೇವೆ ಆರಂಭಿಸಿದ ಶರಣಬಸಪ್ಪ ಕೊಡ್ಲಾ ಅವರು ಕಾಳಗಿ, ಬೀದರ್ ಜಿಲ್ಲೆಯ ಹಳ್ಳಿಖೇಡ, ಚಿಂಚೋಳಿ ಹಾಗೂ ಎಂ.ಬಿ.ನಗರ ಪೊಲೀಸ್ ಠಾಣೆಗಳಲ್ಲಿ ಸೇವೆ ಸಲ್ಲಿಸಿದ್ದು, ಸದ್ಯ ಆಳಂದ ಪೊಲೀಸ್ ಠಾಣೆಯಲ್ಲಿ ಸಿಪಿಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

2002ರಲ್ಲಿ ಪೊಲೀಸ್ ಇಲಾಖೆಗೆ ಸೇರಿದ ಹೆಡ್ ಕಾನ್‌ಸ್ಟೆಬಲ್ ಅರುಣಕುಮಾರ ಅವರು ಪ್ರಸ್ತುತ ಈಶಾನ್ಯ ವಲಯ ಡಿಐಜಿ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News