Kasaragod | ಸಾವ್ಕಾರ್ ಕುಂಞಿಪಕ್ಕಿ ಜೀವನ ಆಧಾರಿತ ಕೃತಿ ಬಿಡುಗಡೆ
ಕಾಸರಗೋಡು : ಕೇರಳದ ಮಾಪಿಳ್ಳಪಟ್ಟು ಸಾಹಿತ್ಯ ಇತಿಹಾಸದಲ್ಲಿ ವಿಶಿಷ್ಟ ಸ್ಥಾನವನ್ನು ಪಡೆದಿರುವ ಮೊಗ್ರಾಲ್ನ ಕವಿ, ಸಾಹಿತಿ ಸಾವ್ಕಾರ್ ಕುಂಞಿಪಕ್ಕಿ ಅವರ ಜೀವನ ಮತ್ತು ಸಾಹಿತ್ಯಿಕ ಕೊಡುಗೆಗಳ ಆಧಾರಿತ ಕೆ.ಕೆ.ಅಬೂಬಕರ್ ಕಾವುಗೋಳಿ ಬರೆದಿರುವ ಕೃತಿ ಇತ್ತೀಚೆಗೆ ಬಿಡುಗಡೆಗೊಂಡಿತು.
ಜಿಲ್ಲಾ ಲೈಬ್ರರಿ ಕೌನ್ಸಿಲ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಮಾಜಿ ಅಧ್ಯಕ್ಷ ಪಿ.ಬಿ.ಅಬ್ದುಲ್ ಹಮೀದ್ ಕೃತಿಯನ್ನು ಪತ್ರಕರ್ತ ಟಿ.ಎ.ಶಫೀಕ್ ಹಸ್ತಾಂತರಿಸುವ ಮೂಲಕ ಬಿಡುಗಡೆಗೊಳಿಸಿದರು.
ಬಾಲಕೃಷ್ಣನ್ ಚೆರ್ಕಳ ಅಧ್ಯಕ್ಷತೆ ವಹಿಸಿದ್ದರು. ಲಕ್ಷ್ಮೀ ನಾರಾಯಣ ಕಾವುಮಠ ಮುಖ್ಯ ಅತಿಥಿಯಾಗಿದ್ದರು. ಗೋವಿಂದನ್ ಮಾಸ್ಟರ್ ಕೃತಿಯ ಬಗ್ಗೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ಅಜೀಜ್ ಕಡಪ್ಪುರ, ರಾಧಾಕೃಷ್ಣ ಉಳಿಯತ್ತಡ್ಕ, ಪುಷ್ಪಾಕರನ್ ಬೆಂಡಿಚ್ಚಾಲ್, ಸಿದ್ದೀಕ್ ಅಶ್ರಫ್ ಅಲಿ, ಪಿ.ಸಿ.ಹಾಶಿರ್ ಮಂಗಳೂರು, ರವೀಂದ್ರನ್ ಪಾಡಿ, ಕರೀಂ ಚೌಕಿ, ಎಂ.ಎ.ಮುಮ್ತಾಜ್, ನಿಸಾರ್ ಪೆರ್ವಾಡ್, ಮಹ್ರೂಫ್, ಸಲಾಮ್ ಕುನ್ನಿಲ್, ರಹ್ಮಾನ್ ಮುಟ್ಟತ್ತೋಡಿ, ಪಿ.ಬಿ. ಸಾಧಿಕ್, ಡಾ.ಅಮೀರ್ ಅಲಿ ಮತ್ತು ಅಬ್ದುಲ್ಲ ಕುಂಞಿ ಖನ್ನಾ ಮೊಗ್ರಾಲ್ ಶುಭ ಹಾರೈಸಿದರು.
ಬಶೀರ್ ಅಹಮ್ಮದ್ ಸಿದ್ದೀಕ್ ಮೊಗ್ರಾಲ್ ಸ್ವಾಗತಿಸಿದರು. ಲೇಖಕ ಕೆ.ಕೆ.ಅಬೂಬಕರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಕವಿ ಸಾವ್ಕಾರ್ ಕುಂಞಿ ಪಕ್ಕಿ ಹಾಗೂ ಬಾಲಮುಬು ನುಫಖೀಹ್ ಅವರ ಕವನಗಳನ್ನು ಟಿ.ಕೆ.ಅನ್ವರ್ ಮೊಗ್ರಾಲ್ ಮತ್ತು ನೂಹ್ ಮೊಗ್ರಾಲ್ ವಾಚಿಸಿದರು
ಸಾಹಿತ್ಯ ಪ್ರೇಮಿಗಳು, ಬರಹಗಾರರು, ಮಿತ್ರರು ಹಾಗೂ ಕುಟುಂಬಸ್ಥರು ಭಾಗವಹಿಸಿದ್ದ ಈ ಕಾರ್ಯಕ್ರಮವು ಸಾಂಸ್ಕೃತಿಕ ವೈವಿಧ್ಯತೆಯಿಂದ ಕಳೆಗಟ್ಟಿತ್ತು.