ತಾಜುಲ್ ಉಲಮಾ, ನೂರುಲ್ ಉಲಮಾ ಆಂಡ್ ನೇರ್ಚೆ; 248 ಯುವ ವಿದ್ವಾಂಸರಿಗೆ ಸನದು ಪ್ರದಾನ
ದೇಳಿ: ತಾಜುಲ್ ಉಲಮಾ, ನೂರುಲ್ ಉಲಮಾ ಆಂಡ್ ನೇರ್ಚೆ ಮತ್ತು ಸನದು ಪ್ರದಾನ ಸಮಾರಂಭವು ರವಿವಾರ ಸಅದಾಬಾದ್‌ನಲ್ಲಿ ಸಮಾಪ್ತಿಗೊಂಡಿತು.
ಕಳೆದ ವರ್ಷ ಅಧ್ಯಯನ ಪೂರ್ಣಗೊಳಿಸಿದ 173 ಯುವ ವಿದ್ವಾಂಸರಿಗೆ ಸಅದಿ ಪದವಿ, 43 ಮಂದಿಗೆ ಸ್ನಾತಕೋತ್ತರ ಪದವಿ ಹಾಗೂ 20 ಹಾಫಿಳ್‌ಗಳಿಗೆ ಅಲ್ ಹಾಫಿಳ್ ಪದವಿ ಪ್ರದಾನ ಮಾಡಲಾಯಿತು.
ಸಯ್ಯಿದ್ ಅಲಿ ಬಾಫಖಿ ತಂಙಳ್ ಅವರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಸಮಾರೋಪ ಸಮ್ಮೇಳನವು ಸಯ್ಯಿದ್ ಕೆ.ಎಸ್. ಆಟ್ಟಕ್ಕೋಯ ತಂಙಳ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಬದ್ರುಸ್ಸಾದಾತ್ ಸಯ್ಯಿದ್ ಇಬ್ರಾಹಿಂ ಖಲೀಲ್ ಬುಖಾರಿ ಉದ್ಘಾಟಿಸಿದರು. ರಈಸುಲ್ ಉಲಮಾ ಇ. ಸುಲೈಮಾನ್ ಮುಸ್ಲಿಯಾರ್ ಸನದು ಪ್ರದಾನ ಮಾಡಿದರು. ಮಾಣಿಕ್ಕೋತ್ ಎ.ಪಿ. ಅಬ್ದುಲ್ಲ ಮುಸ್ಲಿಯಾರ್ ಸನದು ಪ್ರದಾನ ಭಾಷಣ ಹಾಗೂ ಪಟ್ಟುುವಂ ಕೆ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಪ್ರಾಸ್ತಾವಿಕ ಭಾಷಣ ಮಾಡಿದರು. ಸಯ್ಯಿದ್ ಅನ್ವರ್ ಸಾದಾತ್ ಸಅದಿ ಅಲ್ ಅರ್ಶದಿ ನಡುಟ್ಟಂ ಭಾಷಣ ಮಾಡಿದರು.
ಮಧ್ಯಾಹ್ನ ನಡೆದ ಸಅದಿ ಸಂಗಮವು ಎಂ.ಯು.ಎಸ್. ಅಧ್ಯಕ್ಷ ಅಬ್ದುಲ್ಲತೀಫ್ ಸಅದಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಅಧ್ಯಕ್ಷ ಸಯ್ಯಿದ್ ಕೆ.ಎಸ್. ಆಟ್ಟಕ್ಕೋಯ ತಂಙಳ್ ಕುಂಬೋಲ್ ಉದ್ಘಾಟಿಸಿದರು. ಸಯ್ಯಿದ್ ಜಲಾಲುದ್ದೀನ್ ಸಅದಿ ಕೊನ್ನಾರ ಪ್ರಾರ್ಥನೆ ನಡೆಸಿದರು. ಸಅದುಲ್ ಉಲಮಾ ಎ.ಪಿ. ಅಬ್ದುಲ್ಲ ಮುಸ್ಲಿಯಾರ್ ಮಾಣಿಕ್ಕೋತ್ ಹಾಗೂ ಕೆ.ಕೆ. ಹುಸೈನ್ ಬಾಖವಿ ವಯನಾಡ್ ನಸೀಹತ್ ನೀಡಿದರು. ಉಬೈದುಲ್ಲಾಹಿ ಸಅದಿ ನದ್ವಿ, ಕುಟ್ಟಶ್ಶೇರಿ ಅಬ್ದುಲ್ಲ ಬಾಖವಿ, ಅಬ್ದುಲ್ ಹಕೀಂ ಸಅದಿ ಕೊಯ್ಯೋಡ್, ಅಬ್ದುಲ್ ಕರೀಂ ಸಅದಿ ಏಣಿಯಾಡಿ, ಶರೀಫ್ ಸಅದಿ ಮಾವಿಲಾಡಂ, ಬಶೀರ್ ಸಅದಿ ವಿರಾಜ್‌ಪೇಟೆ ಹಾಗೂ ಅಶ್ರಫ್ ಸಅದಿ ಮಲ್ಲೂರು ಭಾಷಣ ಮಾಡಿದರು. ಚಿಯ್ಯೂರ್ ಅಬ್ದುಲ್ಲ ಸಅದಿ ಸ್ವಾಗತಿಸಿದರು ಹಾಗೂ ನೌಫಲ್ ಸಅದಿ ವಂದಿಸಿದರು.