×
Ad

ಕಾಸರಗೋಡು: ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹರ್ಷದ್ ವರ್ಕಾಡಿ ಸೇರಿ ಮೂವರು ಕಾಂಗ್ರೆಸ್‌ ನಿಂದ ಉಚ್ಚಾಟನೆ

Update: 2023-10-07 16:57 IST

 ಹರ್ಷದ್ ವರ್ಕಾಡಿ

ಕಾಸರಗೋಡು: ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹರ್ಷದ್ ವರ್ಕಾಡಿ ಸೇರಿದಂತೆ ಮೂವರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಚಾಟಿಸಲಾಗಿದೆ. 

ʼವರ್ಕಾಡಿ ಸಹಕಾರಿ ಬ್ಯಾಂಕ್ ಚುನಾವಣೆಯಲ್ಲಿ ಯು ಡಿ ಎಫ್ - ಎಲ್ ಡಿ ಎಫ್ ಮೈತ್ರಿ ವಿರುದ್ಧ ಹರ್ಷದ್ ವರ್ಕಾಡಿ ನೇತೃತ್ವದ ಕಾಂಗ್ರೆಸ್ ನ ಒಂದು ಬಣ ಬಿಜೆಪಿ ಜೊತೆ ಕೈ ಜೋಡಿಸಿದೆʼ ಎಂದು ಆರೋಪಿ ಸಿ ಹರ್ಷದ್ ವರ್ಕಾಡಿ, ಸಹಕಾರಿ ಬ್ಯಾಂಕ್ ಮಾಜಿ ಅಧ್ಯಕ್ಷ ಖಾದರ್ ಹಾಜಿ ಹಾಗೂ ಆರಿಫ್ ಮಚ್ಚಂಪಾಡಿ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸೋಮಪ್ಪ ಆದೇಶ ಹೊರಡಿಸಿದ್ದಾರೆ.  

ಸಹಕಾರಿ ಬ್ಯಾಂಕ್ ಗೆ ನಾಳೆ (8) ಚುನಾವಣೆ ನಡೆಯಲಿದ್ದು, ಸಿಪಿಎಂ ಬೆಂಬಲದೊಂದಿಗೆ ಕಾಂಗ್ರೆಸ್ ಈಗ ಈ ಬ್ಯಾಂಕ್ ನಲ್ಲಿ ಆಡಳಿತ ನಡೆಸುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News