ಸ್ಥಳೀಯಾಡಳಿತ ಚುನಾವಣೆ | ಪುತ್ತಿಗೆ, ಬೇಕಲ ಡಿವಿಜನ್ ಮರು ಮತಎಣಿಕೆಯಲ್ಲಿ ಯುಡಿಎಫ್, ಎಲ್.ಡಿ.ಎಫ್.ಗೆ ಗೆಲುವು
ಕಾಸರಗೋಡು: ಜಿಲ್ಲಾ ಪಂಚಾಯತ್ ನ ಪುತ್ತಿಗೆ ಮತ್ತು ಬೇಕಲ ಡಿವಿಜನ್ ನ ಮರುಮತ ಎಣಿಕೆ ಪೂರ್ಣಗೊಂಡಿದ್ದು, ಪುತ್ತಿಗೆಯಲ್ಲಿ ಯುಡಿಎಫ್ ಅಭ್ಯರ್ಥಿ ಜಯಿಸಿದ್ದರೆ, ಬೇಕಲ ದಿಂದ ಎಲ್ ಡಿ ಎಫ್ ಅಭ್ಯರ್ಥಿ ಗೆಲುವಿನ ನಗೆ ಬೀರಿದ್ದಾರೆ.
ಪುತ್ರಿಗೆಯಿಂದ ಯುಡಿಎಫ್ ನ ಜೆ.ಎಸ್.ಸೋಮಶೇಖರ್ ಹಾಗೂ ಬೇಕಲದಿಂದ ಎಲ್.ಡಿ.ಎಫ್.ನ ಟಿ.ವಿ. ರಾಧಿಕಾ ಗೆಲುವು ಸಾಧಿಸಿದ್ದಾರೆ.
ಶನಿವಾರ ಮತ ಎಣಿಕೆ ಸಂದರ್ಭ ತೀವ್ರ ಪೈಪೋಟಿಗೆ ಈ ಎರಡು ಡಿವಿಜನ್ ಗಳು ಕಾರಣವಾಗಿದ್ದು, ಅಂತಿಮ ಕ್ಷಣದಲ್ಲಿ ಕನಿಷ್ಠ ಮತಗಳ ಅಂತರದಿಂದ ಸೋಮಶೇಖರ್ ಮತ್ತು ರಾಧಿಕಾ ಜಯಿಸಿದ್ದರು.. ಇವರ ಆಯ್ಕೆಯನ್ನು ಪ್ರಶ್ನಿಸಿ ಸೋಮಶೇಖರ್ ರ ಪ್ರತಿಸ್ಪರ್ಧಿ ಬಿಜೆಪಿಯ ಮಣಿಕಂಠ ರೈ ಹಾಗೂ ರಾಧಿಕಾರ ಪ್ರತಿಸ್ಪರ್ಧಿ ಯು ಡಿ ಎಫ್ ನ ಶಾಹಿದಾ ರಶೀದ್ ಮರು ಎಣಿಕೆಗೆ ಚುನಾವಣಾಧಿಕಾರಿ ಗೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಮರು ಮತ ಎಣಿಕೆ ನಡೆಯಿತು.
ಇದರೊಂದಿಗೆ ಕಾಸರಗೋಡು ಜಿಲ್ಲಾ ಪಂಚಾಯತ್ ನ 18 ಡಿವಿಜನ್ ನಲ್ಲಿ ಒಂಭತ್ತು ಸ್ಥಾನಗಳನ್ನು ಗಳಿಸಿರುವ ಎಲ್ ಡಿ ಎಫ್ ಅಧಿಕಾರ ಉಳಿಸಿಕೊಂಡಿದೆ. ಯುಡಿಎಫ್ 8 ಮತ್ತು ಬಿಜೆಪಿ ಒಂದು ಸ್ಥಾನ ಗಳಿಸಿದೆ.