×
Ad

ಸ್ಥಳೀಯಾಡಳಿತ ಚುನಾವಣೆಯ ಮತ ಎಣಿಕೆ ಬಿರುಸು: ಕಾಸರಗೋಡು ಜಿಪಂನಲ್ಲಿ ಎಲ್.ಡಿ.ಎಫ್-ಯುಡಿಎಫ್ ಮಧ್ಯೆ ಜಿದ್ದಾಜಿದ್ದಿ

ನಗರಸಭೆ, ಗ್ರಾಪಂಗಳಲ್ಲಿ ಯುಡಿಎಫ್, ಬ್ಲಾಕ್ ಪಂಚಾಯತ್ ಗಳಲ್ಲಿ ಎಲ್.ಡಿ.ಎಫ್. ಮುನ್ನಡೆ

Update: 2025-12-13 10:12 IST

ಕಾಸರಗೋಡು: ಜಿಲ್ಲೆಯ ಸ್ಥಳೀಯಾಡಳಿತ ಸಂಸ್ಥೆ ಚುನಾವಣೆಯ ಮತ ಎಣಿಕೆ ಭರದಿಂದ ಸಾಗಿದ್ದು, ಜಿಲ್ಲಾ ಪಂಚಾಯತ್ ನಲ್ಲಿ ಎಲ್.ಡಿ.ಎಫ್-ಯುಡಿಎಫ್ ಮಧ್ಯೆ ಮುನ್ನಡೆಗಾಗಿ ಜಿದ್ದಾಜಿದ್ದಿ ಕಂಡುಬರುತ್ತಿದೆ.

ಎಲ್.ಡಿ.ಎಫ್. ಏಳು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಯುಡಿಎಫ್ ಆರು ಸ್ಥಾನಗಳಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿದೆ. ಬಿಜೆಪಿ ಒಂದು ಸ್ಥಾನದಲ್ಲಿ ಮುನ್ನಡೆಯಲಿದೆ.

ಗ್ರಾಮ ಪಂಚಾಯತ್ ನಲ್ಲಿ ಯುಡಿಎಫ್ ಮುನ್ನಡೆ ಕಾಯ್ದುಕೊಂಡಿದೆ. ಯುಡಿಎಫ್ 11, ಎಲ್.ಡಿ.ಎಫ್. 9 ಮತ್ತು ಎನ್.ಡಿ.ಎ 7, ಇತರರು 1 ಪಂಚಾಯತ್ ನಲ್ಲಿ ಮುನ್ನಡೆ ಸಾಧಿಸಿದ್ದಾರೆ.

ಬ್ಲಾಕ್ ಪಂಚಾಯತ್ ನಲ್ಲಿ ಎಲ್.ಡಿ.ಎಫ್ 4, ಯು.ಡಿ.ಎಫ್. ಮತ್ತು ಎನ್.ಡಿ.ಎ. ತಲಾ ಒಂದರಲ್ಲಿ ಮುನ್ನಡೆಯಲ್ಲಿದೆ

ನಗರಸಭೆಯಲ್ಲಿ ಎಲ್.ಡಿ.ಎಫ್. 2 ಮತ್ತು ಯುಡಿ ಎಫ್ 1ರಲ್ಲಿ ಮುನ್ನಡೆ ಕಾಯ್ದು ಕೊಂಡಿದೆ.

ಒಟ್ಟು ಫಲಿತಾಂಶವನ್ನು ಅವಲೋಕಿಸಿದರೆ ಜಿಲ್ಲೆಯಲ್ಲಿ ಎಲ್.ಡಿ.ಎಫ್ ಮುನ್ನಡೆ ಕಾಯ್ದುಕೊಂಡಿರುವುದು ಸ್ಪಷ್ಟವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News