ಕಾಸರಗೋಡು: ತಂಡದಿಂದ ಯುವಕನ ಅಪಹರಣ
Update: 2025-12-17 22:58 IST
ಕಾಸರಗೋಡು: ಹಾಡಹಗಲೇ ತಂಡವೊಂದು ಯುವಕನನ್ನು ಅಪಹರಿಸಿದ ಘಟನೆ ಕಾಸರಗೋಡು ನಗರದಲ್ಲಿ ನಡೆದಿದ್ದು, ತಂಡವನ್ನು ಪತ್ತೆ ಹಚ್ಚುವಲ್ಲಿ ಕಾಸರಗೋಡು ಪೊಲೀಸರು ಯಶಸ್ವಿ ಯಾಗಿದ್ದಾರೆ.
ಹಾಸನದಿಂದ ತಂಡವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ನಗರದ ಕರಂದಕ್ಕಾಡ್ ನ ಹೋಟೆಲ್ ಪರಿಸರದಿಂದ ಆಂಧ್ರಪ್ರದೇಶ ನೋಂದಾವಣೆಯ ಕಾರಿನಲ್ಲಿ ತಂಡವೊಂದು ಮೇಲ್ಪರಂಬದ ಹನೀಫ್ ಎಂಬವರನ್ನು ಬುಧವಾರ ಮಧ್ಯಾಹ್ನ ಅಪಹರಿಸಿದ್ದು, ಇದನ್ನು ಗಮನಿಸಿದ ಹೊಟೇಲ್ ಕಾವಲುಗಾರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಕಾರ್ಯ ಪ್ರವೃತ್ತ ರಾದ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ತಂಡವನ್ನು ಬಲೆಗೆ ಬೀಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಣಕಾಸು ವಿಚಾರ ಅಪಹರಣಕ್ಕೆ ಕಾರಣ ಎಂದು ಪೊಲೀಸರಿಗೆ ಪ್ರಾಥಮಿಕ ಮಾಹಿತಿ ಲಭಿಸಿದೆ.