ಕಾಸರಗೋಡು: ಕಾಸರಗೋಡು ನಗರದ ಲಾಡ್ಜ್‌ವೊಂದರಲ್ಲಿ ಎಂ.ಡಿ. ಎಂ . ಎ ಮಾದಕ ವಸ್ತು ಸಹಿತ ಯುವತಿ ಮತ್ತು ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಬೇಳ ಕಡಂಬಳ ನಿವಾಸಿ ಶೆರೀಫಾ (35) ಮತ್ತು ಕಾಞಂಗಾಡ್ ಐಞೋತ್‌ನ ರಾಫಿ (31) ಎಂದು ಗುರುತಿಸಲಾಗಿದೆ.

ಕಾಸರಗೋಡು ಟೌನ್ ಸಬ್ ಇನ್‌ಸ್ಪೆಕ್ಟರ್ ಪಿ.ವಿ. ಮನು ಅವರ ನೇತೃತ್ವದಲ್ಲಿ ಜಿಲ್ಲಾ ಮಾದಕ ದ್ರವ್ಯ ನಿಗ್ರಹ ದಳ ವಿಶೇಷ ಕಾರ್ಯಪಡೆ ಮತ್ತು ನಾರ್ಕೋಟಿಕ್ಸ್ ಸೆಲ್ ಸಿಬ್ಬಂದಿ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor