×
Ad

ಕುಂಬಳೆ: ರಸ್ತೆ ಅಪಘಾತದ ಗಾಯಾಳು ಯುವಕ ಮೃತ್ಯು

Update: 2023-10-03 10:56 IST

ಕಾಸರಗೋಡು, ಅ.3: ದ್ವಿಚಕ್ರ ವಾಹನ ಮತ್ತು ಖಾಸಗಿ ಬಸ್ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲಾಗಿದ್ದ ಸವಾರನೋರ್ವ ಮೃತ ಪಟ್ಟಿದ್ದಾರೆ

  ಉಪ್ಪಳ ಸೋಂಕಾಲ್ ನಿವಾಸಿ ಇಬ್ರಾಹೀಂ ಖಲೀಲ್ (23) ಮೃತಪಟ್ಟವರು. ರವಿವಾರ ರಾತ್ರಿ ಕುಂಬಳೆ ಭಾಸ್ಕರ ನಗರದಲ್ಲಿ ಅಪಘಾತ ನಡೆದಿತ್ತು. ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದ್ದ ಖಲೀಲ್ ಇಂದು ಬೆಳಗ್ಗೆ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದಾರೆ.

ದ್ವಿಚಕ್ರ ವಾಹನ ಸಹ ಸವಾರ ಉಪ್ಪಳ ಮಣಿಮುಂಡದ ಮುಹಮ್ಮದ್ ಮಾಝ್ ಎಂಬವರು ತೀವ್ರ ಗಾಯಗೊಂಡಿದ್ದು, ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News