ಕರಾಟೆಯಲ್ಲಿ ಗಿನ್ನಿಸ್ ದಾಖಲೆ: ಹೊದ್ದೂರು ಗ್ರಾ.ಪಂ. ವತಿಯಿಂದ ಶಝಾ ಫಾತಿಮಾಗೆ ಸನ್ಮಾನ
ಮಡಿಕೇರಿ : ಇತ್ತೀಚಿಗೆ ತಮಿಳುನಾಡಿನ ಚೆನ್ನೈ ನಲ್ಲಿ ನಡೆದಿದ್ದ ಕರಾಟೆ ವಿಭಾಗದ ಗುಂಪಿನಲ್ಲಿ, 30 ನಿಮಿಷಗಳ ತಡೆರಹಿತ ಕತಾ ಮೂಲಕ ಗಿನ್ನೆಸ್ ದಾಖಲೆ ಜೊತೆಗೆ ಕುಮಿತೆ ವೈಯುಕ್ತಿಕ ವಿಭಾಗದಲ್ಲಿ ಚಿನ್ನದ ಪದಕ ಪಡೆದ ನಾಪೋಕ್ಲುವಿನ ಶಝಾ ಫಾತಿಮಾ ಅವರನ್ನು ಹೊದ್ದೂರು ಗ್ರಾಮ ಪಂಚಾಯಿತಿ ವತಿಯಿಂದ ಮಂಗಳವಾರ ನಡೆದಿದ್ದ ಗ್ರಾಮ ಸಭೆಯಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಎ ಹಂಸ ಅವರು ಸನ್ಮಾನ ಮಾಡಿದರು.
ಶಝಾ ಫಾತಿಮಾ ಅವರಿಗೆ ವೈಯುಕ್ತಿಕವಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹೆಚ್.ಎ ಹಂಸ ಅವರು ಧನ ಸಹಾಯವನ್ನು ನೀಡಿ ಪ್ರೋತ್ಸಾಹಿಸಿದರು.
ಶಝಾ ಫಾತಿಮಾ ನಾಪೋಕ್ಲುವಿನ ಬೇತು ಗ್ರಾಮದ ನಿವಾಸಿ ಖಾಸಿಮ್ ಮತ್ತು ನೌಸ್ರೀನ್ ದಂಪತಿಯ ಮಗಳಾಗಿದ್ದು, ಬೆಂಗಳೂರಿನ ಬರಕಾ ಇಂಟರ್ನ್ಯಾಷನಲ್ ಕಾಲೇಜಿನಲ್ಲಿ 7ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದಾರೆ.
ಈ ಸಂದರ್ಭ ಅಭಿವೃದ್ಧಿ ಅಧಿಕಾರಿ ಅಬ್ದುಲ್ಲಾ, ಗ್ರಾಮ ಉಪಾಧ್ಯಕ್ಷರಾದ ಅನುರಾಧ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರಾದ ಕೆ ಮೊಣ್ಣಪ್ಪ, ಹೊದ್ದೂರು ನೀರು ಮತ್ತು ನೈರ್ಮಲ್ಯ ಸಮಿತಿ ಅಧ್ಯಕ್ಷರಾದ ಎಂ.ಬಿ.ಹಮೀದ್, ಗ್ರಾಮ ಪಂಚಾಯಿತಿ ಸದಸ್ಯರಾದ ಚೌರೀರ ನಾಣಯ್ಯ(ನವೀನ್), ಕುಸುಮಾವತಿ ,ಲಕ್ಷ್ಮಿ, ಟೈನಿ ಕಡ್ಲೆರ, ಚೌರೀರ ಅನಿತಾ, ತಹಶೀಲ್ದಾರ್ ಪ್ರವೀಣ್, ಕಾರ್ಯನಿರ್ವಹಣಾಧಿಕಾರಿ ಶೇಖರ್, ಸಹಾಯಕ ಕಾರ್ಯಪಾಲಕ ಅಭಿಯಂತರರು ರಘು, ಭೂ ದಾಖಲೆಗಳ ಸಹಾಯಕ ನಿರ್ದೇಶಕರು, ಸಿ ಡಿ ಪಿ ಓ, ಕ್ಷೇತ್ರ ಶಿಕ್ಷಣಾಧಿಕಾರಿ, ಸೆಸ್ಕ್ ಅಭಿಯಂತರರು, ಹಾಗೂ ಎಲ್ಲಾ ಇಲಾಖೆಗಳ ಅಧಿಕಾರಿ ಗಳು ಹಾಜರಿದ್ದರು.