×
Ad

ಮಡಿಕೇರಿ | ಭಾರೀ ಗಾಳಿಮಳೆಗೆ ಕುಸಿದ ಮನೆಯ ಗೋಡೆ: ಮಹಿಳೆ ಮೃತ್ಯು

Update: 2025-07-26 11:34 IST

ಮಡಿಕೇರಿ, ಜು.26: ಕಳೆದ ರಾತ್ರಿ ಸುರಿದ ಭಾರೀ ಗಾಳಿ, ಮಳೆಯಿಂದ ಮನೆಯ ಗೋಡೆ ಕುಸಿದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಸೋಮವಾರಪೇಟೆ ತಾಲೂಕಿನ ಹಾನಗಲ್ಲು ಗ್ರಾಮದಲ್ಲಿ ನಡೆದಿದೆ.

ಹಾನಗಲ್ಲು ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಕಲಬುರಗಿ ಜಿಲ್ಲೆಯ ನಿವಾಸಿ ರವಿ ಎಂಬವರ ಪತ್ನಿ ಸುಷ್ಮಾ ಮೃತಪಟ್ಟವರು.

ರವಿ ಪತ್ನಿ ಹಾಗೂ ಮೂವರು ಮಕ್ಕಳೊಂದಿಗೆ ಹಾನಗಲ್ಲು ಗ್ರಾಮದ ಎ.ಎನ್.ಸಚಿನ್ ಎಂಬವರ ಬಾಡಿಗೆ ಮನೆಯಲ್ಲಿ ವಾಸವಿದ್ದರು. ರಾತ್ರಿ ಸುರಿದ ಧಾರಾಕಾರ ಮಳೆಗೆ ಮನೆಯ ಗೋಡೆ ಕುಸಿದುಬಿದ್ದಿದೆ. ಅದರಡಿಗೆ ಸಿಲುಕಿ ಸುಷ್ಮಾ ಮೃಪಟ್ಟಿದ್ದಾರೆ. ಅವರ ತಮ್ಮ ಅಕ್ಷಯ್ ಗೆ ಭುಜಕ್ಕೆ ಗಾಯವಾಗಿದ್ದು, ಅವರನ್ನು ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸುಷ್ಮಾರ ಮೂವರು ಮಕ್ಕಳು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News