Napoklu | ಹಿಂದುತ್ವ ಸಂಘಟನೆಯ ಕಾರ್ಯಕರ್ತನ ಮೇಲೆ ಹಲ್ಲೆ ಆರೋಪ ; ನಾಲ್ವರ ಬಂಧನ
Update: 2026-02-28 11:51 IST
ಮಡಿಕೇರಿ : ಹಿಂದುತ್ವ ಸಂಘಟನೆಯ ಕಾರ್ಯಕರ್ತನೊಬ್ಬನ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಬಿಂದು ಮಣಿ ಹೇಳಿದ್ದಾರೆ.
ಸಿದ್ದಿಕ್, ಸುಹೈಲ್, ಶಾಫಿ, ರಶೀದ್ ಬಂಧಿತರು. ದೊಡ್ಡಪುಲಿಕೋಟು ಗ್ರಾಮದ ಕರವಂಡ ಪಿ.ಲವ ನಾಣಯ್ಯ ಅವರು ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಈ ನಾಲ್ವರ ವಿರುದ್ಧ ಹಲ್ಲೆ ಆರೋಪದ ದೂರು ದಾಖಲಿಸಿದ್ದರು
ಬಲ್ಲಮಾವಟಿಯಲ್ಲಿ ಫೆ.28 ರಂದು ನಡೆಯಲಿದ್ದ ಹಿಂದೂ ಸಂಗಮ ಕಾರ್ಯಕ್ರಮದ ಹಿನ್ನೆಲೆ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ಅಪ್ಪಚ್ಚಿರ ಗೌತಮ್ ಎಂಬುವವರ ಮೇಲೆ ಕೆಲವರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.