×
Ad

ವಿರಾಜಪೇಟೆ | 1.60 ಕೆಜಿ ಗಾಂಜಾ ಸಹಿತ ಇಬ್ಬರ ಬಂಧನ

Update: 2026-02-22 15:10 IST

ಮಡಿಕೇರಿ, ಫೆ.22: ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ವಿರಾಜಪೇಟೆ ಪೊಲೀಸರು ಬಂಧಿಸಿದ್ದು, ಅವರಿಂದ 1 ಕೆಜಿ 60 ಗ್ರಾಂ ಗಾಂಜಾ ವಶಕ್ಕೆ ಪಡೆದಿರುವುದಾಗಿ ವರದಿಯಾಗಿದೆ.

ವಿರಾಜಪೇಟೆಯ ಸುಣ್ಣದ ಬೀದಿಯ ಹಸೈನಾರ್ ರಝಾಕ್ (43) ಹಾಗೂ ಬಾಳುಗೋಡು ಬಿಟ್ಟಂಗಾಲ ಗ್ರಾಮದ ಮೋಹನ ಎ.ಜಿ.ಅಶೋಕ (42) ಬಂಧಿತ ಆರೋಪಿಗಳಾಗಿದ್ದಾರೆ. ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಒಂಟಿಯಂಗಡಿ ರಸ್ತೆಯ ಪ್ರೌಢಶಾಲೆ ಮೈದಾನದ ಬಳಿಯ ಬಸ್ ತಂಗುದಾಣದಲ್ಲಿ ಇವರಿಬ್ಬರು ಗಾಂಜಾ ಮಾರಾಟಕ್ಕೆ ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ.

ವಿರಾಜಪೇಟೆ ಉಪವಿಭಾಗದ ಮಹೇಶ್ ಕುಮಾರ್, ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ಪಿಎಸ್ಸೈಗಳಾದ ಲತಾ ಎನ್.ಜೆ., ವಾಣಿಶ್ರೀ ಬಿ.ಎಸ್., ಪ್ರಮೋದ್, ಎಎಸ್ಸೈ ಸೋಮಣ್ಣ ಕೆ.ಬಿ., ಎಚ್.ಸಿಗಳಾದ ನವೀನ್ ಕುಮಾರ್ ಎಸ್.ಎಲ್, ಬಸವರಾಜು ಎಂ, ಅಬ್ದುಲ್ ಮಜೀದ್, ಹನೀಫ್ ಕೆ.ಎ., ಬೋಪಣ್ಣ ಎಂ.ಎಸ್., ರಾಧಾ, ಪಿ.ಸಿಗಳಾದ ಮಹೇಶ್ ಎಸ್, ಶಿವಪ್ರಸಾದ್, ರಾಜೇಶ್ ಎಸ್. ಹಾಗೂ ರಾಘವೇಂದ್ರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಪೊಲೀಸ್ ಅಧಿಕಾರಿಗಳ ಹಾಗೂ ಸಿಬ್ಬಂದಿಯ ಕಾರ್ಯದಕ್ಷತೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಆರ್.ಎನ್. ಶ್ಲಾಘಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News