×
Ad

ಅಬುಧಾಬಿಯಲ್ಲಿ ಲೋಕೋ ಪೈಲಟ್ ಆಗಿ ಕೊಡಗಿನ ರಿಯಾಝ್

Update: 2026-07-02 11:52 IST

ಮಡಿಕೇರಿ, ಜು.2: ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಆರಂಭವಾದ 'ಇತ್ತಿಹಾದ್' ರೈಲು ಸೇವೆಯ ಲೋಕೋ ಪೈಲಟ್ ಆಗಿ ಕೊಡಗು ಜಿಲ್ಲೆಯ ಮಾದಾಪುರ ಗ್ರಾಮದ ರಿಯಾಝ್ ನಝೀರ್ ಅವರು ಕಾರ್ಯನಿರ್ವಹಿಸಿದ್ದಾರೆ.

ಸಾರಿಗೆ ಇತಿಹಾಸದಲ್ಲಿ ಮೈಲಿಗಲ್ಲು ಸೃಷ್ಟಿಸಿರುವ ಯು.ಎ.ಇ.ಯ ಹೊಸ ಪ್ರಯಾಣಿಕ ರೈಲು ಸಾರಿಗೆಯ ಪ್ರಥಮ ಯಾನಕ್ಕೆ ಪೈಲಟ್ ಆಗಿ ರಿಯಾಝ್ ಅವರನ್ನು ಅಲ್ಲಿನ ಆಡಳಿತ ನೇಮಕ ಮಾಡಿದೆ. ರಿಯಾಝ್ ಅವರು ಖತರ್ ಮೆಟ್ರೊ ಮತ್ತು ಖತರ್ ಟ್ರಾಮ್ ಸೇವೆಗಳ ಉದ್ಘಾಟನೆಯ ವೇಳೆ ಕೂಡ ಮೊದಲ ಕ್ಯಾಪ್ಟನ್ ಆಗಿ ಕಾರ್ಯನಿರ್ವಹಿಸಿದ್ದರು.

"ಬಾಲ್ಯದ ಸಮಯದಲ್ಲಿ ಕನಿಷ್ಠ ಸೈಕಲ್ ಕೂಡ ನನಗೆ ಸಿಗಲಿಲ್ಲ. ಈಗ ಅತ್ಯಂತ ಜವಾಬ್ದಾರಿಯುತವಾದ ರೈಲು ಸೇವೆಯ ಪ್ರಥಮ ಯಾನದ ಪೈಲಟ್ ಆಗುವ ಯೋಗ ಸಿಕ್ಕಿರುವುದಕ್ಕೆ ಹೆಮ್ಮೆ ಆಗುತ್ತಿದೆ" ಎಂದು ರಿಯಾಝ್ ಅವರು ಪ್ರತಿಕ್ರಿಯಿಸಿದ್ದಾರೆ. ‌

ರಿಯಾಝ್ ಅವರು ಪ್ರಸ್ತುತ ಸುಂಟಿಕೊಪ್ಪದಲ್ಲಿ ವಾಸವಿರುವ ಹಾಜಿ ನಝೀರ್ ಮತ್ತು ರಹ್ಮತ್ ದಂಪತಿಯ ಪುತ್ರ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News