×
Ad

ಮುಖ್ಯಮಂತ್ರಿ ಸ್ಥಾನಕ್ಕೆ ನಾನೂ ಆಕಾಂಕ್ಷಿ : ಬಸವರಾಜ ರಾಯರಡ್ಡಿ

Update: 2024-09-09 15:00 IST

 ಬಸವರಾಜ ರಾಯರಡ್ಡಿ

ಕೊಪ್ಪಳ: "ರಾಜ್ಯದಲ್ಲಿ ಮುಖ್ಯಮಂತ್ರಿ ಆಗಬೇಕು ಎಂದು ಕೆಲವರು ಆಸೆ ಪಡುತ್ತಿದ್ದಾರೆ. ಆದರೆ ಆ ಹುದ್ದೆ ಖಾಲಿಯಿಲ್ಲ. ಕಲ್ಯಾಣ ಕರ್ನಾಟಕ ಭಾಗಕ್ಕೆ ಆದ್ಯತೆ ನೀಡಿದಲ್ಲಿ ನಾನೇ ಮಂಚೂಣಿಯಲ್ಲಿ ಇರುತ್ತೇನೆ, ಬೇರೆಯವರಿಗೆ ಮುಖ್ಯಮಂತ್ರಿ ಸ್ಥಾನ ಕೊಡುವುದಾದರೆ ನಾನೂ ಆಕಾಂಕ್ಷಿ" ಎಂದು ಮುಖ್ಯಮಂತ್ರಿ ಅವರ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.

ಸೋಮವಾರ ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʼಸಿದ್ದರಾಮಯ್ಯ ಮುಂದಿನ ಮೂರುವರೆ ವರ್ಷ ಸಿಎಂ ಆಗಿರಬೇಕು. ಆಗ ರಾಜ್ಯದಲ್ಲಿ ಅಭಿವೃದ್ದಿ ಆಗುತ್ತದೆ. ಅವರು ಮುಂದುವರೆಯಬೇಕು ಎಂಬುದು ನಮ್ಮ ಆಸೆʼ ಎಂದು ಹೇಳಿದರು.

ಆರ್.ವಿ.ದೇಶಪಾಂಡೆ ಅವರು ಹೇಳಿದ್ದರಲ್ಲಿ ತಪ್ಪು ಇಲ್ಲ. ಸಿಎಂ ಆಗಲು ಯಾರೇ ಆಗಲಿ ಆಸೆ ಪಟ್ಟರೆ ಅದರಲ್ಲಿ ತಪ್ಪೇನಿಲ್ಲ. ನಾನು ಯಾಕೆ ಸಿಎಂ ಆಗಬಾರದು?. ನಾನು ಕೂಡ ಲಿಂಗಾಯತ ನಾಯಕ, ಲಿಂಗಾಯತರಿಗೆ ನೀಡುವುದಾದರೆ ನನ್ನನ್ನು ಪರಿಗಣಿಸಲಿ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News