×
Ad

ಕೊಪ್ಪಳ | ಮುಸ್ಲಿಮರ ಪ್ರಾಮಾಣಿಕತೆಯಿಂದ ಸರಕಾರದ ಹಣ ಸದುಪಯೋಗ : ಶಾಸಕ ಬಸವರಾಜ ರಾಯರೆಡ್ಡಿ

Update: 2025-12-08 21:17 IST

ಕೊಪ್ಪಳ / ಕುಕನೂರ, ಡಿ.8: ತಾಲೂಕಿನ ಮುಸ್ಲಿಮರ ಪ್ರಾಮಾಣಿಕತೆಯಿಂದ ಸರಕಾರದ ಹಣ ಸದುಪಯೋಗ ಆಗುತ್ತಿದೆ ಎಂದು ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರ ಹಾಗೂ ಶಾಸಕ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.

ನಗರದ ಜಾಮಿಯಾ ಮಸೀದಿಯಲ್ಲಿ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರಿಗೆ ಮುಸ್ಲಿಮ್ ಸಮಾಜದವರಿಂದ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಸನ್ಮಾನ ಸ್ವೀಕರಿಸಿ ನಂತರ ಮಾತನಾಡಿದ ಅವರು, ನಾನು ಶಾದಿ ಮಹಲ್ ಕಟ್ಟಡಕ್ಕೆ 50 ಲಕ್ಷ ರೂ. ಹಾಗೂ ಎರಡನೇ ಬಾರಿಗೆ 25 ಲಕ್ಷ ರೂ. ಸರಕಾರದಿಂದ ಮಂಜೂರು ಮಾಡಿಸಿದ್ದೆ. ಆದರೆ ಈಗ ಮಸೀದಿ ಕಟ್ಟಡಕ್ಕೆ ನಾನು ಕೊಟ್ಟ ಅನುದಾನಕ್ಕಿಂತಲೂ ನಾಲ್ಕೈದು ಪಟ್ಟು ಹೆಚ್ಚು ಕೆಲಸವಾಗಿದೆ, ಸ್ವತಃ ದುಡ್ಡು ಖರ್ಚು ಮಾಡಿ ಶ್ರದ್ಧೆಯಿಂದ ಕೆಲಸ ಮಾಡಿದ ನಿಮ್ಮ ನಿಸ್ವಾರ್ಥ ಕಾರ್ಯಕ್ಕೆ ಅಲ್ಲಾಹ್‌ ಮೆಚ್ಚುತ್ತಾನೆ ಎಂದು ಹೇಳಿದರು.

ಕುಕನೂರು ಶಾದಿ ಮಹಲ್ ಕಟ್ಟಡಕ್ಕೆ ಹಣ ಮಂಜೂರು :

ತಳಕಲ್ ಶಾದಿ ಮಹಲ್ ಕಟ್ಟಡಕ್ಕೆ 1 ಕೋಟಿ ರೂ., ಸಂಕನೂರ ಶಾದಿ ಮಹಲ್ ಕಟ್ಟಡಕ್ಕೆ 1 ಕೋಟಿ ರೂ,, ಮುಧೋಳ ಶಾದಿ ಮಹಲ್ ಕಟ್ಟಡಕ್ಕೆ 50 ಲಕ್ಷ ರೂ, ನೀಡಿ ಈಗಾಗಲೇ ಕಟ್ಟಡವಾಗಿದೆ. ಇನ್ನೂ ಕುದರಿಮೋತಿ ಶಾದಿ ಮಹಲ್ ಕಟ್ಟಡಕ್ಕೆ ಹಣ ಮಂಜೂರು ಮಾಡಬೇಕಿದೆ. ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆಗೆ 4 ಸಾವಿರ ಕೋಟಿ ರೂ, ಮೀಸಲಿಡಲಾಗಿದೆ. ಕುಕನೂರು ಮದೀನಾ ಮಸೀದಿ ಗೆ 30 ಲಕ್ಷ ರೂ. ಮಂಜೂರು ಮಾಡಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಮುಖಂಡರಾದ ಕಾಸೀಮಸಾಬ ತಳಕಲ್, ಅಬ್ದುಲ್ ರಹಮಾನ್ ಸಾಬ ತಳಕಲ್, ಸತ್ಯನಾರಾಯಣ ಹರಪನಹಳ್ಳಿ, ಮಂಜುನಾಥ ಕಡೇಮನಿ, ಚಂದ್ರಶೇಖರಯ್ಯ ಹಿರೇಮಠ, ದಸ್ತಗೀರಸಾಬ ಗದ್ವಾಲ್, ಗೂಡುಸಾಬ ಮಕಾನದಾರ, ದಸ್ತಗೀರಸಾಬ ರಾಜೂರ, ಸಿದ್ದಯ್ಯ ಕಳ್ಳಿಮಠ, ಪಟ್ಟಣ ಪಂಚಾಯಿತಿ ಸದಸ್ಯ ರಹಮಾನ್ ಸಾಬ ಮಕ್ಕಪ್ಪನವರ್, ಶರಣಪ್ಪ ಗಾಂಜಿ, ಶಫೀಸಾಬ ಗುಂಡಿಹಿಂದಲ್, ಜಾಮಿಯಾ ಮಸೀದಿಯ ಸದರ್ ಸಾಬ ರಷೀದ್ ಅಹ್ಮದ್ ಉಮಚಗಿ ಮುಂತಾದವರು ಉಪಸ್ಥಿತರಿದ್ದರು.

ಹಾಫೀಜ್ ಸಾಬ್ ಖುರಾನ್ ಶರೀಫ್ ಕುರ್‌ಆನ್ ಪಠಿಸಿದರು. ಅದರ ಭಾವಾರ್ಥವನ್ನು ಅಲ್ಲಾವುದ್ದೀನ್‌ ಯಮ್ಮಿ ಓದಿ ತಿಳಿಸಿದರು. ಪಟ್ಟಣ ಪಂಚಾಯತ್ ಸದಸ್ಯ ರಫೀಸಾಬ ಹಿರೆಹಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಮೆಹಬೂಬ ಸಾಬ ಗುಂಡಿಹಿಂದಲ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಪ್ರಾಮಾಣಿಕತೆಗೆ ಇನ್ನೊಂದು ಹೆಸರೇ ಮುಸ್ಲಿಮ್ ಬಾಂಧವರು. ಎಲ್ಲ ಜಾತಿ ಧರ್ಮದ ಜನರಲ್ಲೂ ಕೆಟ್ಟವರೂ ಇರುತ್ತಾರೆ, ಒಳ್ಳೆಯವರೂ ಇರುತ್ತಾರೆ. ಹಾಗಂತ ಎಲ್ಲ ಜಾತಿ ಧರ್ಮ ಕೆಟ್ಟದ್ದು ಅಂತ ಹೇಳುವುದಕ್ಕಾಗುವುದಿಲ್ಲ. ನಮ್ಮಲ್ಲಿ ಹಿಂದೂ ಮುಸ್ಲಿಮ್‌ ಎನ್ನುವ ಯಾವುದೇ ಬೇಧ ಭಾವವಿಲ್ಲ, ನಾವೆಲ್ಲರೂ ಒಂದೇ ಎನ್ನುವ ಭಾವೈಕ್ಯತೆಯ ಸಂಕೇತವಾಗಿದೆ, ಕರ್ನಾಟಕ ಸರ್ಕಾರ ವಕ್ಫ್ ಮಂಡಳಿಗೆ ಹಣ ಕೊಡುತ್ತದೆ, ಅದನ್ನೇ ಜನಪ್ರತಿನಿಧಿಗಳಾದ ನಾವು ಮಸೀದಿ, ಶಾದಿ ಮಹಲ್ ನಂತಹ ಜನೋಪಯೋಗಿ ಕಾರ್ಯಕ್ರಮಕ್ಕೆ ಮಂಜೂರು ಮಾಡುತ್ತೇವೆ.

- ಬಸವರಾಜ ರಾಯರೆಡ್ಡಿ, ಸಿಎಂ ಆರ್ಥಿಕ ಸಲಹೆಗಾರರು

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News