×
Ad

ಕೊಪ್ಪಳ | ʼಪ್ರೀ ವೆಡ್ಡಿಂಗ್ ಶೂಟ್ʼ ಮುಗಿಸಿ ವಾಪಾಸು ಬರುತ್ತಿದ್ದ ಜೋಡಿ ಅಪಘಾತದಲ್ಲಿ ಮೃತ್ಯು

Update: 2025-12-08 17:52 IST

ಕೊಪ್ಪಳ : ಕೆಲವೇ ದಿನಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದ ಜೋಡಿ ಅಪಘಾತದಲ್ಲಿ ಮೃತಪಟ್ಟ ಘಟನೆ ಗಂಗಾವತಿ ತಾಲೂಕಿನ ಚಿಕ್ಕಬೆಣಕಲ್ ಸಮೀಪ ಸಂಭವಿಸಿದೆ.

ಮೃತರನ್ನು ಕೊಪ್ಪಳ ತಾಲೂಕಿನ ಹನುಮನ ಹಟ್ಟಿ ಗ್ರಾಮದ ಕರಿಯಪ್ಪ (26) ಹಾಗೂ ಕಾರಟಗಿ ತಾಲೂಕು ಮುಷ್ಟೂರಿನ ಕವಿತಾ ಎಂದು ಗುರುತಿಸಲಾಗಿದೆ.

ಈ ದುರ್ಘಟನೆಯು ಭಾನುವಾರ ರಾತ್ರಿ ನಡೆದಿದ್ದು, ಈ ಜೋಡಿ ʼಪ್ರೀ ವೆಡ್ಡಿಂಗ್ ಶೂಟ್ʼ ಮುಗಿಸಿಕೊಂಡು ಮರಳಿ ಬರುತ್ತಿದ್ದರು ಎಂದು ತಿಳಿದು ಬಂದಿದೆ.

ರವಿವಾರ ಪ್ರಿವೆಡ್ಡಿಂಗ್ ಶೂಟಿಂಗ್ ನಡೆಸಿ, ಕರಿಯಪ್ಪ ಕವಿತಾಳನ್ನು ಊರಿಗೆ ಬಿಟ್ಟು ಬರಲು ಬೈಕ್ ನಲ್ಲಿ ಹೊರಟಾಗ ಗಂಗಾವತಿ ತಾಲೂಕು ಚಿಕ್ಕಬೆಣಕಲ್ ಹತ್ತಿರ ಲಾರಿ ಬಂದು ಢಿಕ್ಕಿ ಹೊಡೆದಿದ್ದು, ಕವಿತಾ ಸ್ಥಳದಲ್ಲೆ ಮೃತಪಟ್ಟಿದ್ದು, ಕರಿಯಪ್ಪ ಅವರನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News