ಕನಕಗಿರಿ|ಗಣಿ, ಭೂ ವಿಜ್ಞಾನ ಇಲಾಖೆ ಕಾರಿಗೆ ಬಸ್ ಢಿಕ್ಕಿ : ಸಿಬ್ಬಂದಿ ಅಪಾಯದಿಂದ ಪಾರು
Update: 2025-12-17 19:59 IST
ಕನಕಗಿರಿ: ಕನಕಗಿರಿಯ ತೊಂಡೆತೇವರಪ್ಪ ದೇವಸ್ಥಾನದ ಕಮಾನಿನ ಬಳಿ ಸರಕಾರಿ ಬಸ್ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಕಾರಿಗೆ ಢಿಕ್ಕಿ ಹೊಡೆದಿದ್ದು, ಕಾರಿನಲ್ಲಿದ್ದ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅಪಘಾತದ ತೀವ್ರತೆಗೆ ಕಾರಿನ ಗ್ಲಾಸ್ ಸಂಪೂರ್ಣವಾಗಿ ಪುಡಿ ಪುಡಿಯಾಗಿವೆ. ಕಾರಿನಲ್ಲಿದ್ದ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.