×
Ad

ಕೊಪ್ಪಳ| ಬಿಎಸ್‌ಪಿಎಲ್ ಕಾರ್ಖಾನೆ ಸ್ಥಾಪಿಸುವಂತೆ ಆಗ್ರಹಿಸಿ ರೈತರಿಂದ ಅನಿರ್ದಿಷ್ಟವಾದಿ ಧರಣಿ

Update: 2025-12-17 18:26 IST

ಕೊಪ್ಪಳ: ಕೊಪ್ಪಳದ ಹತ್ತಿರ ಬಿಎಸ್‌ಪಿಎಲ್ ಕಂಪೆನಿ ಸ್ಥಾಪಿಸಿ ಇಲ್ಲವೇ ಸರಕಾರಿ ನೌಕರಿ ನೀಡಿ ಎಂದು ಭೂಮಿ ಕಳೆದುಕೊಂಡ ರೈತರು ಸರಕಾರದ ವಿರುದ್ಧ ಅರೆಬೆತ್ತಲೆ ಪ್ರತಿಭಟನೆಯನ್ನು ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ಪಿತ್ರಾರ್ಜಿತ ಜಮೀನನ್ನು ಸರಕಾರ ಏಕಾಏಕಿಯಾಗಿ ಯಾವುದೇ ನೋಟಿಸ್ ನೀಡದೆ ಕಿತ್ತುಕೊಂಡಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ರೈತ ಮುಖಂಡರಾದ ಹನುಮಂತಪ್ಪ ಕೌದಿ, ಹನುಮೇಶ್ ಹಾಲವರ್ತಿ, ಪ್ರಾಣೇಶ್ ಹಾಲವರ್ತಿ, ಮನೋಜ್ ಹಾಲವರ್ತಿ, ಸ್ವಾಮಿ ಹಾಲವರ್ತಿ , ದುರುಗಪ್ಪ ಬಾವಿಮನಿ ಈರಪ್ಪ ಓಜನಹಳ್ಳಿ, ಬಸವರಾಜ ಹೊಸಮನಿ, ಕೆಮಪ್ಪ ಇಟಗಿ, ಕಾಮಣ್ಣ ಕಂಬಳಿ, ಗೋಣಿಬಸಪ್ಪ ಬಡಿಗೇರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News