×
Ad

ಕೊಪ್ಪಳ| ಯೂರಿಯಾ ಖಾಲಿಯಾದ ಹಿನ್ನೆಲೆ: ತೆರೆಯದ ಗೊಬ್ಬರದ ಅಂಗಡಿ; ರೈತರಿಂದ ಪ್ರತಿಭಟನೆ

Update: 2025-08-09 11:51 IST

ಕೊಪ್ಪಳ: ಯೂರಿಯಾ ಗೊಬ್ಬರಕಾಗಿ ರೈತರಿಂದ ಇಂದು ಮತ್ತೆ ಬಸವೇಶ್ವರ ವೃತ್ತದ ಬಳಿ ಪ್ರತಿಭಟನೆ ನಡೆಯಿತು. ಆ.8 ಶುಕ್ರವಾರ ಸೊಸೈಟಿ ಗಳಿಗೆ ಗೊಬ್ಬರ ಸಾಗಿಸುತ್ತಿದ್ದ ಲಾರಿಗಳನ್ನು ತಡೆದು ನಿಲ್ಲಿಸಿ ಪ್ರತಿಭಟಿಸಿದ್ದ ರೈತರು ಇಂದು ಗೊಬ್ಬರದ ಅಂಗಡಿ ತೆರೆಯದ ಕಾರಣ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು.

ಇಂದು ಎರಡನೇ ಶನಿವಾರ  ಮತ್ತು ಗೊಬ್ಬರ ಕೂಡ ಖಾಲಿಯಾಗಿರುವುದರಿಂದ ಗೊಬ್ಬರ ವಿತರಣಾ ಕೇಂದ್ರ ತೆರೆಯುವುದಿಲ್ಲ ಎಂದು ಹೇಳಿದ್ದಾರೆ. ನಾವು ಇಲ್ಲಿ ಗೊಬ್ಬರಕ್ಕಾಗಿ ಬಂದಿದ್ದೆವು ಆದ್ರೆ ಇವರು ಹೀಗೆ ಹೇಳುತ್ತಾರೆ ಎಂದು ರೈತರು ಆಕ್ರೋಶ ವ್ಯಕ್ತ ಪಡಿಸಿದರು.

ನಿನ್ನೆ ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ ಅವರು ರೈತರೊಂದಿಗೆ ಮಾತುಕತೆ ನಡೆಸಿ ಜಿಲ್ಲೆಯಲ್ಲಿ ಗೊಬ್ಬರದ ಕೊರತೆ ಇಲ್ಲ ಎಂದು ಹೇಳಿದ್ದರು.

ಆದರೆ ಗೊಬ್ಬರದ ಅಂಗಡಿ ತೆರೆಯದ ಕಾರಣ ರೈತರು ಯಾವುದೇ ಬಸ್ ಗಳನ್ನು ಹೋಗಲು ಬಿಡದೆ ಪ್ರತಿಭಟಿಸುತ್ತಿದ್ದು, ಇದರಿಂದ ಸಂಚಾರ ದಟ್ಟಣೆ ಉಂಟಾಗಿದೆ. ಬಸ್ ನಲ್ಲಿ ಪ್ರಯಾಣಿಸುವವರು ತೀವ್ರ ತೊಂದರೆ ಅನುಭವಿಸುವಂತಾಗಿದೆ.

ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ, ಸಹಾಯಕ ಆಯುಕ್ತ ಮಹೇಶ್ ಮಾಲಗಿತ್ತಿ, ಕೊಪ್ಪಳ ತಹಶೀಲ್ದಾರ್ ವಿಠ್ಠಲ್ ಚೌಗಲೆ ಪರಿಸ್ಥಿಯ ಬಗ್ಗೆ ಮಾಹಿತಿ ಪಡೆದು ರೈತರಿಗೆ ಸೋಮವಾರ ಬಂದು ಗೊಬ್ಬರ ಪಡೆಯುವಂತೆ ಜಿಲ್ಲಾಧಿಕಾರಿಗಳು,

ಮನವೊಲಿಕೆ ಮಾಡಿದರು, ಜಿಲ್ಲಾಧಿಕಾರಿಗಳ ಮನವಿಯ ನಂತರ ರೈತರುಪ್ರತಿಭಟನೆ ಕೈ ಬಿಟ್ಟರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News