ಕೊಪ್ಪಳ | ಆಟೋ ಪಲ್ಟಿ: ವೃದ್ದೆ ಮೃತ್ಯು
Update: 2025-08-29 19:56 IST
ಸಾಂದರ್ಭಿಕ ಚಿತ್ರ
ಕುಷ್ಟಗಿ( ಕೊಪ್ಪಳ ಜಿಲ್ಲೆ): ಆಟೋವೊಂದು ಪಲ್ಟಿಯಾಗಿ 65 ವರ್ಷದ ವೃದ್ದೆ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ ನಿಡಶೇಸಿ ಗ್ರಾಮದ ಬಳಿ ನಡೆದಿದೆ.
ಮೃತರನ್ನು ಕುಷ್ಟಗಿಯ ಶಿವಮ್ಮ ಶಂಕ್ರಪ್ಪ ಕೆಂಚೋಡಿ(65) ಎಂದು ಗುರುತಿಸಲಾಗಿದೆ.
ಶುಕ್ರವಾರ ಶಿವಮ್ಮ ಅವರು ಕುಷ್ಟಗಿಯಿಂದ ನಿಡಶೇಸಿ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದ್ದು, ಗಾಯಗೊಂಡಿದ್ದ ಶಿವಮ್ಮ ಘಟನಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಕುಷ್ಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.