×
Ad

ಗಂಗಾವತಿ | ಅಂಜನಾದ್ರಿ ಬೆಟ್ಟ ಏರಿದ ಯಾತ್ರಾರ್ಥಿಗೆ ಹೃದಯಾಘಾತ : ಗುಜರಾತ್ ಮೂಲದ ವ್ಯಕ್ತಿ ಮೃತ್ಯು

Update: 2026-03-04 22:01 IST

ಸಾಂದರ್ಭಿಕ ಚಿತ್ರ

ಗಂಗಾವತಿ : ತಾಲ್ಲೂಕಿನ ಚಿಕ್ಕ ರಾಂಪೂರದಲ್ಲಿರುವ ಅಂಜನಾದ್ರಿ ಬೆಟ್ಟ ದರ್ಶನಕ್ಕೆ ಬಂದಿದ್ದ ಗುಜರಾತ್ ಮೂಲದ ಯಾತ್ರಾರ್ಥಿಯೊಬ್ಬರು ಬೆಟ್ಟ ಏರಿ ಇಳಿಯುವ ವೇಳೆ ಆಯಾಸದಿಂದ ಬಳಲಿಕೊಂಡು ಹೃದಯಾಘಾತವಾಗಿ ಮೃತಪಟ್ಟ ಘಟನೆ ನಡೆದಿದೆ.

ಮೃತರನ್ನು ಗುಜರಾತ್ ರಾಜ್ಯದ ಕಚ್ ಜಿಲ್ಲೆ, ಗಾಂಧಿಧಾಮ ತಾಲ್ಲೂಕಿನ ಪದನ್ ಗ್ರಾಮದ ಕೃಷಿಕ ಅರ್ಜುನಾಬಾಯ್ ರಾಮಾಜಿಬಾಯ್ (52) ಎಂದು ಗುರುತಿಸಲಾಗಿದೆ.

ಅಂಜನಾದ್ರಿ ಬೆಟ್ಟ ಏರಿ ದರ್ಶನ ಮಾಡಿಕೊಂಡು ಇಳಿಯುವಾಗ ಹೆಚ್ಚಿನ ಆಯಾಸ ಉಂಟಾಗಿ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ಆನೆಗೊಂದಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಗಂಗಾವತಿ ಉಪವಿಭಾಗ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಅವರು ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.

ಪ್ರಕರಣ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗಿದೆ.






Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News