×
Ad

ಕೊಪ್ಪಳ | ಕ್ರೌರ್ಯ ತುಂಬಿದ ವ್ಯವಸ್ಥೆಯ ವಿರುದ್ಧ ಧ್ವನಿಯೆತ್ತಿದವರು ಪ್ರವಾದಿ ಮುಹಮ್ಮದ್‌ : ಬಸವರಾಜ್ ಶೀಲವಂತರ್

Update: 2025-09-08 19:21 IST

ಕೊಪ್ಪಳ: ಪ್ರವಾದಿ ಮುಹಮ್ಮದ್ ಪೈಗಂಬರ್ ಅವರು ಕ್ರೌರ್ಯ ಇಡೀ ಜಗತ್ತನ್ನು ಹಿಡಿತದಲ್ಲಿಟ್ಟುಕೊಂಡಿದ್ದ ಅಂದಿನ ಕಾಲಘಟ್ಟದೊಳಗೆ ಅವರು ಜೀವವಿರೋಧಿ ವ್ಯವಸ್ಥೆ ವಿರುದ್ಧ ಧ್ವನಿಯೆತ್ತಿರುವುದಿದೆಯಲ್ಲ ಅವರ ಈ ಜೀವಪರ ಕಾಳಜಿಯನ್ನು ನಾವು ಅದೇಷ್ಟು ಸ್ಮರಿಸಿದರು ಕಡಿಮೆ ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕರಾದ ಬಸವರಾಜ್ ಶೀಲವಂತರ್ ಹೇಳಿದರು.

ನಗರದ ಹಟಗಾರ ಪೇಟೆ ಬಡಾವಣೆಯಲ್ಲಿ ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ 1,500ನೇ ಜನ್ಮದಿನದ ಅಂಗವಾಗಿ ಭ್ರಾತೃತ್ವ ಸಮಿತಿಯಿಂದ ನಡೆದ ಪ್ರವಾದಿಯವರ ಸೌಹಾರ್ದ ಸಂದೇಶ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಸವರಾಜ್ ಶೀಲವಂತರ್ ಅವರು ಮುಂದುವರೆದು ಮಾತನಾಡಿ, ಎಲ್ಲರಿಗೂ ಸಮಾನ ಅವಕಾಶಗಳು ಸಿಗಬೇಕು. ಮೌಡ್ಯತೆ ಹಾಗೂ ಜಾತಿಯತೆ ಅಳಿಯಬೇಕು. ಇಡೀ ಜಗತ್ತು ಹಸಿವು ಮುಕ್ತವಾಗಬೇಕು.  ಶಾಂತಿ ಸೌಹಾರ್ದತೆ ಉಳಿಯಬೇಕು. ಇವು ಅವರ ಆಶಯವಾಗಿತ್ತು. ಒಳ್ಳೆಯ ಆಲೋಚನೆಗಳು. ವಿಚಾರಗಳನ್ನು ಇಟ್ಟುಕೊಂಡು ದೊಡ್ಡ ಧ್ವನಿ ಎತ್ತಿ ಹೋರಾಟ ಮಾಡಿದಂತವರು ಪೈಗಂಬರ್ ರವರು ಯಾವುದೇ ಒಂದು ಜಾತಿಗೆ, ಧರ್ಮಕ್ಕೆ ಸೀಮಿತ ಆದವರಲ್ಲ. ಅವರು ಜಗತ್ತು ಕಂಡ ಶ್ರೇಷ್ಠ ಮಹಾ ಮಾನವತಾವಾದಿ ಎಂದು ಹೇಳಿದರು.

ಹಟಗಾರ ಪೇಟೆಯ ಮುಸ್ಲಿಮ್ ಪಂಚ ಕಮಿಟಿಯ ಹಿರಿಯ ಮುಖಂಡ ಖಾಸಿಮ್ ಸಾಬ್ ಲೇಬಗೇರಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಮಾದಿಗ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಮುದುಕಪ್ಪ ಹೊಸಮನಿ, ಅಹಿಂದ ಮುಖಂಡ ಕರೀಮ್ ಪಾಷಾ ಗಚ್ಚಿನ ಮನಿ, ಗಾಳೆಪ್ಪ ಮುಂಗೋಲಿ, ಗವಿ ಹಲಗಿ, ಗೌಸ್ ನೀಲಿ, ಸುಂಕಪ್ಪ ಮೀಸಿ ಮುಂತಾದವರು ಮಾತನಾಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News