ಕೊಪ್ಪಳ | ಸೂಕ್ಷ್ಮ, ಅತಿ ಸೂಕ್ಷ್ಮ ಸಮುದಾಯಗಳಿಗೆ ಶೇ.1ರಷ್ಟು ಮೀಸಲಾತಿ ಜಾರಿಗೆ ಆಗ್ರಹಿಸಿ ಪ್ರತಿಭಟನೆ
ಕೊಪ್ಪಳ: ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಸಮುದಾಯಗಳಿಗ ಒಳ ಮೀಸಲಾತಿ ಜಾರಿಮಾಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಚೆನ್ನದಾಸರ ಕ್ಷೇಮಾಭಿವೃದ್ಧಿ ಸಂಘ ದಿಂದ ಪ್ರತಿಭಟನಾ ಮೆರವಣಿಗೆಯ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷ ಪರಸಪ್ಪ ಅವರು, ಸುಮಾರು 35 ವರ್ಷಗಳಿಂದ ಸೂಕ್ಷ್ಮ ಮತ್ತು ಅತಿ ಸೂಕ್ತ ಸಮುದಾಯಗಳಿಗೆ ಯಾವುದೇ ಮೀಸಲಾತಿ ದೊರೆತಿಲ್ಲ. ಅನೇಕ ಹೋರಾಟಗಳು ನಡೆದರೂ, ಯಾವುದೇ ಪ್ರಯೋಜನವಾಗಿಲ್ಲ ಎಂದು ಹೇಳಿದರು.
ಪರಿಶಿಷ್ಟ ಜಾತಿಯ ಒಳ ಮೀಸಲಾತಿಗೆ ಸಂಬಂಧಿಸಿದಂತೆ ಡಾ.ಎಚ್. ಎನ್ ನಾಗ ಮೋಹನ್ ದಾಸ್ ಅವರ ಏಕ ಸದಸ್ಯ ಆಯೋಗದ ವರದಿಯಂತೆ ಸೂಕ್ಷ್ಮ ಅತಿ ಸೂಕ್ಷ್ಮ ಜನಾಂಗದವರಿಗೆ ಶೇ.1ರಷ್ಟು ಮೀಸಲಾತಿ ನೀಡಬೇಕು. ಎಂಬುದಾಗಿ ಹೇಳಿತ್ತು, ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವರದಿಯನ್ನು ಸರಿಯಾದ ರೀತಿಯಲ್ಲಿ ಜಾರಿಗೆ ತರದೆ, ಬಲಾಡ್ಯ ಜಾತಿಗಳ ಜೊತೆಯಲ್ಲಿ ಸೇರಿಸಿ ಆದೇಶ ಹೊರಡಿಸಿದ್ದಾರೆ. ಈ ಒಂದು ತೀರ್ಮಾನ ನಮ್ಮ ಸಮಸ್ಯೆಗೆ ಪರಿಹಾರವಾಗಿರುವಂತದ್ದಲ್ಲ ಎಂದು ಆರೋಪಿಸಿದರು.
ನಮಗೆ ಕಾನೂನು ಚೌಕಟ್ಟಿನಲ್ಲಿ"ಸಮಪಾಲು ಸಮಬಾಳು" ಎಂಬ ಮೇಲೆ ಶೇ.1ರಷ್ಟು ಮಿಸಲಾತಿ ಒದಗಿಸಿ ಎಂದು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ರಾಜಪ್ಪ ಮಾಡಬೇನಿ, ದುರಗಪ್ಪ, ಹನುಮಂತಪ್ಪ ಕೋಟಿ, ಭೀಮಪ್ಪ ಗಂಗಾವತಿ, ದುರಗಪ್ಪ ವಟಪರವಿ, ಬಾಲಪ್ಪ ಯಲಬುರ್ಗಾ, ಯಂಕಪ್ಪ, ಯಮನೂರಪ್ಪ, ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.