×
Ad

ಕುಕನೂರು | ತಳಕಲ್ ಗ್ರಾಮದಲ್ಲಿ 594ನೇ ಶುದ್ಧಗಂಗಾ ಘಟಕ ಉದ್ಘಾಟನೆ

Update: 2026-01-02 19:19 IST

ಕುಕನೂರು : ಯಲಬುರ್ಗಾ ಯೋಜನಾ ಕಚೇರಿ ವ್ಯಾಪ್ತಿಯ ತಳಕಲ್ ಗ್ರಾಮ ಪಂಚಾಯತ್‌ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಯೋಗದಲ್ಲಿ ತಳಕಲ್ ಗ್ರಾಮದಲ್ಲಿ 594ನೇ ಶುದ್ಧಗಂಗಾ ಘಟಕವನ್ನು ಗ್ರಾಮ ಪಂಚಾಯತ್‌ ಅಧ್ಯಕ್ಷೆ ಜಹೀರಾಬೇಗಂ ಅವರು ಉದ್ಘಾಟಿಸಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕೊಪ್ಪಳ ಜಿಲ್ಲಾ ನಿರ್ದೇಶಕ ಪ್ರಕಾಶ್ ರಾವ್ ಅವರು, ಪಂಚಭೂತಗಳಲ್ಲಿ ನೀರು ಅತ್ಯಂತ ಪ್ರಮುಖವಾಗಿದ್ದು, ನೀರಿಲ್ಲದೆ ಜೀವನವೇ ಸಾಧ್ಯವಿಲ್ಲ. ಜೀವದಾಯಕವಾದ ನೀರನ್ನು ಹಿತಮಿತವಾಗಿ ಬಳಕೆ ಮಾಡಬೇಕು ಹಾಗೂ ಪೋಲು ಮಾಡಬಾರದು ಎಂದು ಸಲಹೆ ನೀಡಿದರು.

ಗ್ರಾಮ ಪಂಚಾಯತ್‌ ಸದಸ್ಯ ವೀರೇಶ್ ಮಾತನಾಡಿ, ಗ್ರಾಮದಲ್ಲಿ ಶ್ರಮವಹಿಸಿ ಶುದ್ಧಗಂಗಾ ಘಟಕವನ್ನು ನಿರ್ಮಿಸಲಾಗಿದೆ. ಎಲ್ಲರೂ ಶುದ್ಧ ನೀರು ಸೇವಿಸಿ ಘಟಕದ ಪ್ರಯೋಜನವನ್ನು ಪಡೆದುಕೊಳ್ಳಬೇಕು. ಧರ್ಮಸ್ಥಳ ಸಂಸ್ಥೆಯ ಕಾರ್ಯಗಳು ಅತ್ಯಂತ ಉಪಯುಕ್ತವಾಗಿದ್ದು, ಅವುಗಳನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ವೀರನಗೌಡ ಚನ್ನವೀರಗೌಡ ಮಾತನಾಡಿದರು.

ಕಾರ್ಯಕ್ರಮದಲ್ಲಿ ತಾಲೂಕು ಯೋಜನಾಧಿಕಾರಿ ಗಣೇಶ್ ಸ್ವಾಗತಿಸಿದರು, ಶುದ್ಧಗಂಗಾ ಮೇಲ್ವಿಚಾರಕ ಶಿವಾನಂದ ಅಕ್ಕಿ ಧನ್ಯವಾದ ಸಲ್ಲಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್‌ ಸದಸ್ಯರು, ಶುದ್ಧಗಂಗಾ ಉತ್ತರ ವಲಯದ ಯೋಜನಾಧಿಕಾರಿ ಫಕ್ಕೀರಪ್ಪ ಬೆಲ್ಲಾಮುದ್ಧಿ, ಸೇವಾ ಪ್ರತಿನಿಧಿಗಳು, ವಲಯದ ಮೇಲ್ವಿಚಾರಕರು, ಸಂಘದವರು ಹಾಗೂ ಊರಿನ ನಾಗರಿಕರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News