×
Ad

ತುಂಗಭದ್ರಾ ಜಲಾಶಯಕ್ಕೆ ಕ್ರೆಸ್ಟ್‌ಗೇಟ್ ಅಳವಡಿಸಲು ನೀಡಲಾಗಿದ್ದ ಹಣ ಹಿಂದಕ್ಕೆ ಪಡೆದಿಲ್ಲ: ಸಚಿವ ಶಿವರಾಜ್‌ ತಂಗಡಗಿ

Update: 2026-01-26 23:03 IST

ಕೊಪ್ಪಳ: ತುಂಗಭದ್ರಾ ಜಲಾಶಯಕ್ಕೆ ಹೊಸ ಕ್ರೆಸ್ಟ್‌ಗೇಟ್ ಅಳವಡಿಸಲು ರಾಜ್ಯ ಸರಕಾರದಿಂದ  ನೀಡಲಾಗಿದ್ದ ಅನುದಾನವನ್ನು ಹಿಂದಕ್ಕೆ ಪಡೆದಿಲ್ಲ. ಬಿಜೆಪಿ ನಾಯಕರು ಆಧಾರ ರಹಿತ ಹೇಳಿಕೆ ನೀಡಿದ್ದಾರೆ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್‌ ತಂಗಡಗಿ ಹೇಳಿದರು.

ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಸಚಿವ ಶಿವರಾಜ್‌ ತಂಗಡಗಿ, ಹೊಸ ಕ್ರೆಸ್ಟ್‌ಗೇಟ್ ಅಳವಡಿಸುವ ಕಾಮಗಾರಿ ನಿಗದಿತ ಸಮಯದಲ್ಲಿ ಪೂರ್ಣಗೊಳ್ಳಲಿದೆ. ರಾಜ್ಯ ಸರಕಾರ ತನ್ನ ಪಾಲಿನ 10 ಕೋಟಿ ಹಿಂದಕ್ಕೆ ಪಡೆದಿಲ್ಲ. ಇದೆಲ್ಲ ಆಧಾರ ರಹಿತ ಹೇಳಿಕೆಗಳಾಗಿವೆ. ಹಣವನ್ನು ಹಿಂದಕ್ಕೆ ಪಡೆಯಲಾಗಿದ್ದರೆ ದಾಖಲೆಗಳನ್ನು ಕೊಡಲಿ ಎಂದು ಹೇಳಿದರು.

ಕೇಂದ್ರ ಸರಕಾರದಿಂದ ಪ್ರತಿವರ್ಷ ತುಂಗಭದ್ರಾ ಮಂಡಳಿಗೆ ಎಲ್ಲ ರಾಜ್ಯಗಳ ಪಾಲಿನ ಅನುದಾನ ಬರುತ್ತದೆ. ಅದೇ ಹಣದ ಬುಕ್ ಅಡ್ಜೆಸ್ಟ್‌ಮೆಂಟ್‌ನಿಂದ ಹಣ ಪಾವತಿಯಾಗುತ್ತದೆ. ಮೊದಲ ಬಾರಿಗೆ ಕರ್ನಾಟಕ 10 ಕೋಟಿ ಕೊಟ್ಟಿದೆ’ ಇದರ ಜೊತೆಗೆ ಆಂದ್ರ-ತೆಲಂಗಾಣ ರಾಜ್ಯಗಳು ತಮ್ಮ ಪಾಲಿನ ಹಣ ನೀಡಿವೆ ಎಂದು ಹೇಳಿದರು. 

ಗೇಟ್‌ಗಳ ಅಳವಡಿಕೆ ಮಾಡಿದ ಗುತ್ತಿಗೆದಾರರಿಗೆ ಈಗಾಗಲೇ 11 ಕೋಟಿ ಪಾವತಿಸಲಾಗಿದ್ದು, ಇಂದು ಇನ್ನೂ 3.80 ಕೋಟಿ ನೀಡಲಾಗುವುದು. ‘ಜಲಾಶಯಗಳ ಸುರಕ್ಷತಾ ತಜ್ಞ ಕನ್ನಯ್ಯ ನಾಯ್ಡು ಅವರಿಗೆ ಮಾಹಿತಿ ಕೊರತೆಯಿದೆ. ನಿಗದೀತ ಸಮಯದೊಳಗೆ ಕ್ರೆಸ್ಟ್‌ಗೇಟ್‌ಗಳ ಅಳವಡಿಕೆ ಕಾಮಗಾರಿ ಪೂರ್ಣಗೊಳ್ಳುತ್ತೆ ಎಂದರು.

ಈಗಾಗಲೇ 18ನೇ ಕ್ರೆಸ್ಟ್‌ಗೇಟ್ ಅಳವಡಿಸಲಾಗಿದೆ, ಇದೇ ತಿಂಗಳ 30ರ ಒಳಗೆ 4, 11, 19, 20 ಮತ್ತು 27 ಗೇಟ್ ಅಳವಡಿಕೆ ಮುಗಿಯಲಿದೆ’ ಈ ಕುರಿತು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಜೊತೆಗೂ ಚರ್ಚಿಸಲಾಗುವುದು ಎಂದರು. ಇದರ ಕುರಿತು ಮಾಧ್ಯಮಗಳಿಗೆ ತಪ್ಪು ಮಾಹಿತಿ ನೀಡಿದ ಅಧಿಕಾರಿಗಳಿಗೆ ನೋಟಿಸ್ ನೀಡಲಾಗುವುದು ಎಂದು ಶಿವರಾಜ್‌ ತಂಗಡಗಿ ಹೇಳಿದರು. 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News