×
Ad

ವಿಶ್ವೇಶ್ವರಯ್ಯ ತಾಂತ್ರಿಕ ವಿವಿ | ಫರ್ಹಾನಾ ಐಎಂ ರಿಗೆ ಎಮ್‌ಟೆಕ್ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ನಲ್ಲಿ ಎರಡನೇ ರ‍್ಯಾಂಕ್

Update: 2025-02-15 10:08 IST

ಕುಂದಾಪುರ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ನಡೆಸಿದ ಎಮ್‌ಟೆಕ್ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ಪರೀಕ್ಷೆಯಲ್ಲಿ ಫರ್ಹಾನಾ ಐಎಂ ಅವರಿಗೆ ಎರಡನೇ ರ‍್ಯಾಂಕ್ ಲಭಿಸಿದೆ.

ಮೂರು ಮಕ್ಕಳ ತಾಯಿಯಾಗಿರುವ ಫರ್ಹಾನಾ ಅವರದ್ದು ಸ್ಪೂರ್ತಿದಾಯಕ, ಮಾದರಿ ಸಾಧನೆ. ತಮ್ಮ ವೈಯಕ್ತಿಕ ಬದ್ಧತೆಗಳನ್ನು ಪೂರೈಸುತ್ತಾ ಅವರು ಅಧ್ಯಯನದಲ್ಲಿ ಉತ್ತಮ ಸಾಧನೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ಪರಿಶ್ರಮ, ನಿರಂತರ ಅಧ್ಯಯನವು, ಕಲಿಯುವ ಉತ್ಸಾಹವಿದ್ದರೆ ಯಾವುದೇ ಸವಾಲನ್ನು ಎದುರಿಸಿ ಉತ್ತಮ ಫಲಿತಾಂಶ ಪಡೆಯಬಹುದು ಎಂಬುದಕ್ಕೆ ಸಾಕ್ಷಿ.

ಇಸ್ಮಾಯಿಲ್ ಕುಂದಾಪುರ ಅವರ ಪುತ್ರಿಯಾಗಿರುವ ಫರ್ಹಾನಾ ಅವರು ಇಮ್ರಾನ್ ಕುಂದಾಪುರ ಅವರ ಪತ್ನಿ. ಫರ್ಹಾನಾ, ಸೌದಿ ಅರೇಬಿಯಾದ ಎಕ್ಸ್‌ಪರ್ಟೈಸ್ ಕಾಂಟ್ರಾಕ್ಟಿಂಗ್ ಕಂಪೆನಿಯ ಸಿಇಒ ಮುಹಮ್ಮದ್ ಆಶಿಫ್ ಕರ್ನಿರೆ ಅವರ ನಾದಿನಿ.

"ಶಿಕ್ಷಣದ ಮೇಲಿನ ಪ್ರೀತಿ ಮತ್ತು ನನ್ನ ಮಕ್ಕಳಿಗೆ ಮಾದರಿಯಾಗುವ ಬಯಕೆಯು ಉನ್ನತ ವ್ಯಾಸಂಗವನ್ನು ಮುಂದುವರಿಸಲು ಪ್ರೇರೇಪಿಸಿತು. ತಾವು ಎದುರಿಸುವ ಕಷ್ಟಗಳನ್ನು ಮೆಟ್ಟಿನಿಂತು ತಮ್ಮ ಕನಸುಗಳನ್ನು ಬೆನ್ನಟ್ಟಲು, ನನ್ನ ಸಾಧನೆಯು ತಾಯಂದಿರು ಮತ್ತು ವಿದ್ಯಾರ್ಥಿಗಳಿಗೆ ಮಾದರಿಯಾಗಬಹುದು", ಎಂದು ಅವರು ತಮ್ಮ ಸಾಧನೆಯ ಹಿಂದಿನ ಪ್ರೇರಣೆಯನ್ನು ಹಂಚಿಕೊಂಡರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News