ಬಾಗೇಪಲ್ಲಿ | ಜಿಂಕೆ ಮಾಂಸ ಸಾಗಾಟ ಆರೋಪ : ಐವರ ವಿರುದ್ದ ಪ್ರಕರಣ ದಾಖಲು

Update: 2024-03-14 12:38 GMT

ಬಾಗೇಪಲ್ಲಿ: ಜಿಂಕೆ ಮಾಂಸವನ್ನು ಸಾಗಿಸುತ್ತಿದ್ದ ಆರೋಪದ ಮೇಲೆ 5 ಜನರನ್ನು ಪೋಲೀಸರು ಬಂಧಿಸಿ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಒಪ್ಪಿಸಿರುವ ಘಟನೆ ಬಾಗೇಪಲ್ಲಿ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ.

ತಾಲ್ಲೂಕಿನ ಯಲ್ಲಂಪಲ್ಲಿ ಗ್ರಾಮದ ಚಂದ್ರಶೇಖರ್, ಪುಟ್ಟಪರ್ತಿ ಗ್ರಾಮದ ನಾಗಪ್ಪ ಎಂಬುವವರು ರಾತ್ರಿ 9 ಗಂಟೆ ಸಮಯದಲ್ಲಿ ಪುಟ್ಟಪರ್ತಿ ವ್ಯಾಪ್ತಿಯ ಬೆಟ್ಟಗಳ ತಪ್ಪಲಿನಲ್ಲಿ ಬೀದಿ ನಾಯಿಗಳು ಕೊಂದು ತಿನ್ನುತ್ತಿದ್ದ ಜಿಂಕೆಯನ್ನು ನೋಡಿ ಅವುಗಳನ್ನು ಓಡಿಸಿದ್ದಾರೆ. ನಂತರ ಸಪ್ರಂಪಲ್ಲಿ ಗ್ರಾಮದ ಕೃಷ್ಣಪ್ಪ, ಸಂದೀಪ್, ವೆಂಕಟೇಶಪ್ಪ ಎಂಬುವವರಿಗೆ ಕೂಡಲೇ ಬರುವಂತೆ ಮಾಹಿತಿ ನೀಡಿ ಜಿಂಕೆ ಮಾಂಸವನ್ನು ಸಾಗಿಸುತ್ತಿದ್ದ ಸಂದರ್ಭದಲ್ಲಿ ಖಚಿತ ಮಾಹಿತಿ ಮೇರೆಗೆ ಕೊಂಡರೆಡ್ಡಿಪಲ್ಲಿ ಗ್ರಾಮದ ಬಳಿ ಪೋಲೀಸರು ಚಂದ್ರಶೇಖರ್ ಮತ್ತು ನಾಗಪ್ಪ ಅವರನ್ನು ಬಂದಿಸಿದ್ದಾರೆ ಎಂದು ಹೇಳಲಾಗಿದೆ.

ಅವರನ್ನು ತನಿಖೆಗೊಳಪಡಿಸಿ ವಿಚಾರಣೆ ಮಾಡಿದಾಗ ಅವರು ಕೃಷ್ಣಪ್ಪ, ಸಂದೀಪ್, ವೆಂಕಟೇಶಪ್ಪ ಅವರ ಹೆಸರನ್ನು ಹೇಳಿದ್ದಾರೆ.ಬಳಿಕ ಇಂದು ಅವರನ್ನೂ ಬಂಧಿಸಿ ಅರಣ್ಯ ಇಲಾಖೆಯ ಅಧಿಕಾರಿಗಳ ವಶಕ್ಕೆ ನೀಡಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಅವರ ವಿರುದ್ದ ಪ್ರಕರಣ ದಾಖಲು ಮಾಡಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News