ಮಹಿಳಾ ಅಭ್ಯರ್ಥಿಗಳು ಗೃಹ ವಿಜ್ಞಾನ, ಸೋಶಿಯಲ್ ವರ್ಕ್, ಸಮಾಜಶಾಸ್ತ್ರ ಅಥವಾ ಸಮುದಾಯ ವಿಜ್ಞಾನ ಪದವಿ ಹೊಂದಿರಬೇಕು.

ಕರ್ನಾಟಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು (WCD) 2026ರ ನವೆಂಬರ್ನಲ್ಲಿ ಅಧಿಕೃತ ಅಧಿಸೂಚನೆ ಹೊರಡಿಸಿದ್ದು, ಒಟ್ಟು 171 ಮಹಿಳಾ ಮೇಲ್ವಿಚಾರಕರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ಲಿಂಕ್ ಮೂಲಕ ಅರ್ಜಿ ಸಲ್ಲಿಸಬಹುದು:

https://cetonline.karnataka.gov.in/FWCD_RECR_2026/login

📌 ಪ್ರಮುಖ ದಿನಾಂಕಗಳು:

• ಅರ್ಜಿ ಸಲ್ಲಿಕೆ ಪ್ರಾರಂಭ: 03 ನವೆಂಬರ್ 2026

• ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 28 ನವೆಂಬರ್ 2026

• ಶುಲ್ಕ ಪಾವತಿಸಲು ಕೊನೆಯ ದಿನಾಂಕ: 29 ನವೆಂಬರ್ 2026

📌 ಪ್ರಮುಖ ಮಾಹಿತಿ

• ಸಂಸ್ಥೆಯ ಹೆಸರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕರ್ನಾಟಕ

• ಹುದ್ದೆಯ ಹೆಸರು: ಮಹಿಳಾ ಮೇಲ್ವಿಚಾರಕರು

• ಒಟ್ಟು ಹುದ್ದೆಗಳು: 171

• ಉದ್ಯೋಗ ಸ್ಥಳ: ಬೆಂಗಳೂರು, ಕರ್ನಾಟಕ

• ವೇತನ ಶ್ರೇಣಿ: ತಿಂಗಳಿಗೆ 44,425 ರೂ.ಗಳಿಂದ 83,700 ರೂ.ವರೆಗೆ

• ಅರ್ಜಿಗಳನ್ನು KEA (Karnataka Examinations Authority) ಮೂಲಕ ಆಹ್ವಾನಿಸಲಾಗಿದೆ.

• ಲಿಖಿತ ಪರೀಕ್ಷೆ/ನೇಮಕಾತಿ ಪ್ರಕ್ರಿಯೆಯನ್ನು KEA ನಡೆಸಲಿದೆ.

📌 ಹುದ್ದೆಗಳ ವಿವರ

• ಒಟ್ಟು ಹುದ್ದೆಗಳು: 171

• ಮಹಿಳಾ ಮೇಲ್ವಿಚಾರಕರು (RPC): 141

• ಮಹಿಳಾ ಮೇಲ್ವಿಚಾರಕರು (KK – ಕಲ್ಯಾಣ ಕರ್ನಾಟಕ): 30

📌 ಅರ್ಹತೆ

ಗೃಹ ವಿಜ್ಞಾನ, ಸೋಶಿಯಲ್ ವರ್ಕ್, ಸಮಾಜಶಾಸ್ತ್ರದಲ್ಲಿ ಪದವಿ ಅಥವಾ ಬಿ.ಎಸ್ಸಿ (ಗೃಹ ವಿಜ್ಞಾನ/ಸಮುದಾಯ ವಿಜ್ಞಾನ) ಪದವಿ ಹೊಂದಿರಬೇಕು.

📌 ವಯೋಮಿತಿ

• ಕನಿಷ್ಠ ವಯಸ್ಸು: 18 ವರ್ಷಗಳು

• ಗರಿಷ್ಠ ವಯಸ್ಸು: 40 ವರ್ಷಗಳು

ವಯೋಮಿತಿ ಸಡಿಲಿಕೆ:

• ವರ್ಗ 2A, 2B, 3A, 3B ಅಭ್ಯರ್ಥಿಗಳಿಗೆ: 3 ವರ್ಷಗಳು

• SC, ST, ಪ್ರವರ್ಗ-1 ಅಭ್ಯರ್ಥಿಗಳಿಗೆ: 5 ವರ್ಷಗಳು

📌 ಅರ್ಜಿ ಶುಲ್ಕ

• ಸಾಮಾನ್ಯ, ಪ್ರವರ್ಗ 2A, 2B, 3A, 3B ಅಭ್ಯರ್ಥಿಗಳಿಗೆ: 750 ರೂ.

• SC, ST, ಪ್ರವರ್ಗ-1, ಮಾಜಿ ಸೈನಿಕರು ಮತ್ತು ತೃತೀಯ ಲಿಂಗಿ ಅಭ್ಯರ್ಥಿಗಳಿಗೆ: 500 ರೂ.

• PWD (ವಿಕಲಚೇತನ) ಅಭ್ಯರ್ಥಿಗಳಿಗೆ: 250 ರೂ.

• ಪಾವತಿ ವಿಧಾನ: ಆನ್ಲೈನ್ ಮೂಲಕ ಮಾತ್ರ.

📌 ಆಯ್ಕೆ ಪ್ರಕ್ರಿಯೆ

1. ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT – ಆನ್ಲೈನ್/ಆಫ್ಲೈನ್)

2. ನೇರ ಸಂದರ್ಶನ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor