×
Ad

Moodbidri : ವಿಮೆನ್ ಇಂಡಿಯಾ ಮೂವ್ಮೆಂಟ್ ವತಿಯಿಂದ ಮಹಿಳಾ ದಿನಾಚರಣೆ

ರಾಷ್ಟ್ರೀಯ ಮಟ್ಟದ ಕ್ರೀಡಾಕೂಟದ ವಿಜೇತೆ ಸಹ್‌ಲಾ ಎಸ್.ಐ ಗೆ ಸನ್ಮಾನ

Update: 2026-03-09 13:14 IST

ಮೂಡುಬಿದಿರೆ: ವಿಮೆನ್ ಇಂಡಿಯಾ ಮೂವ್ಮೆಂಟ್ ಮೂಡುಬಿದಿರೆ ಬ್ರಾಂಚ್ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಜಿಲ್ಲೆಗೆ ಕೀರ್ತಿ ತಂದ ಸಾಧಕಿ ಸಹ್‌ಲಾ ಎಸ್.ಐ. ಅವರನ್ನು ಸನ್ಮಾನಿಸಲಾಯಿತು.

ಹಸನಬ್ಬ ಹಾಗೂ ನೆಬಿಸ ದಂಪತಿಯ ಪುತ್ರಿಯಾಗಿರುವ ಸಹ್‌ಲಾ ಅವರು ಇತ್ತೀಚೆಗೆ ಹರಿಯಾಣದ ಮಹರ್ಷಿ ದಯಾನಂದ ವಿಶ್ವವಿದ್ಯಾನಿಲಯದಲ್ಲಿ ನಡೆದ 'ಸ್ಪೆಷಲ್ ಒಲಿಂಪಿಕ್ಸ್ ಭಾರತ್ ರಾಷ್ಟ್ರೀಯ ಮಟ್ಟದ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್-2026' ರಲ್ಲಿ ಅಮೋಘ ಸಾಧನೆ ಮಾಡಿದ್ದಾರೆ. ಜೂನಿಯರ್ ವಿಭಾಗದ ಶಾಟ್ಪುಟ್ ಹಾಗೂ ಮಿಕ್ಸೆಡ್ ರಿಲೇ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಎರಡು ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಅಲ್ಲದೆ, 200 ಮೀಟರ್ ಓಟದಲ್ಲಿ ತೃತೀಯ ಸ್ಥಾನ ಗಳಿಸಿ ಕಂಚಿನ ಪದಕವನ್ನು ಜಯಿಸುವ ಮೂಲಕ ಜಿಲ್ಲೆಯ ಹೆಮ್ಮೆಯ ವಿದ್ಯಾರ್ಥಿನಿಯಾಗಿ ಹೊರಹೊಮ್ಮಿದ್ದಾರೆ.

ಕಾರ್ಯಕ್ರಮದಲ್ಲಿ ವಿಮೆನ್ ಇಂಡಿಯಾ ಮೂವ್ಮೆಂಟ್ ಬ್ರಾಂಚ್ ಅಧ್ಯಕ್ಷೆ ಮಿಶ್ರೀಯಾ, ಕಾರ್ಯದರ್ಶಿ ನಸೀಮಾ ಸಿದ್ದಕಟ್ಟೆ, ಪುತ್ತಿಗೆ ಪಂಚಾಯತ್ ಸದಸ್ಯೆ ತಾಹಿರ ವಾಲ್ಪಾಡಿ, ಕೋಟೆಬಾಗಿಲು ಘಟಕದ ಅಧ್ಯಕ್ಷೆ ಆಬಿದಾ, ಶಮೀಮಾ ಹಾಗೂ ಸದಸ್ಯರಾದ ರೇಷ್ಮಾ, ಝಿನತ್, ಮಾಸುಮ, ಮುಬೀನ ಉಪಸ್ಥಿತರಿದ್ದು ಸಾಧಕಿಯನ್ನು ಅಭಿನಂದಿಸಿದರು.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News