'ಮೂಡುಬಿದಿರೆ ಅಡ್ವೆಂಚರ್ ಡ್ರೈವ್ -2024' ಟಿಎಸ್ ಡಿ ಮೋಟರ್ ಸ್ಪೋಟ್ಸ್ ಈವೆಂಟ್
ಮೂಡುಬಿದಿರೆ, ಆ.26: ತ್ರಿಭುವನ್ ಆಟೋಮೋಟಿವ್ ಸ್ಪೋರ್ಟ್ಸ್ ಕ್ಲಬ್ (ಟಿ.ಎಎಸ್.ಸಿ.), ಬೆದ್ರ ಅಡ್ವೆಂಚರ್ ಕ್ಲಬ್ (ಬಿ.ಎ.ಸಿ.) ಮತ್ತು ಇಂಡಿಯನ್ ಮೋಟರ್ ಸ್ಪೋರ್ಟ್ಸ್ ಕಂಪೆನಿ (ಐ.ಎಂ.ಎಸ್.ಸಿ) ಸಹಯೋಗದಲ್ಲಿ ಫೆಡರೇಶನ್ ಆಫ್ ಮೋಟರ್ ಸ್ಪೋರ್ಟ್ಸ್ ಕ್ಲಬ್ ಆಫ್ ಇಂಡಿಯಾ (ಎಫ್ ಎಂಎಸ್ ಸಿಐ) ಮಾರ್ಗದರ್ಶನದಲ್ಲಿ ಮೂಡುಬಿದಿರೆ ಅಡ್ವೆಂಚರ್ ನ 4ನೇ ಆವೃತ್ತಿಯ 'ಡ್ರೈವ್ -2024' ಟಿಎಸ್ ಡಿ(ಟೈಂ ಸ್ಪೀಡ್ ಡಿಸ್ಟೆನ್ಸ್) ಮೋಟರ್ ಸ್ಪೋಟ್ಸ್ ಈವೆಂಟ್ ಆ.24 ಮತ್ತು 25ರಂದು ಮೂಡುಬಿದಿರೆಯ ಶ್ರೀ ಮಹಾವೀರ ಕಾಲೇಜಿನ ಆವರಣದಲ್ಲಿ ಜರುಗಿತು.
ಇದರ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಮಾಜಿ ಸಚಿವ, ಮೂಡುಬಿದಿರೆಯ ಶ್ರೀ ಮಹಾವೀರ ಕಾಲೇಜಿನ ಆಡಳಿತ ಸಮಿತಿಯ ಅಧ್ಯಕ್ಷ, ತ್ರಿಭುವನ್ ಅಟೋಮೋಟಿವ್ ಸ್ಪೋಟ್ಸ್ ಕ್ಲಬ್ ಗೌರವಾಧ್ಯಕ್ಷ ಕೆ.ಅಭಯಚಂದ್ರ ಜೈನ್, ಸಾಹಸ ಕ್ರೀಡೆಗಳಲ್ಲಿ ಮುಕ್ತ ಮನಸ್ಸಿನಿಂದ ಭಾಗವಹಿಸುವ ಉತ್ಸಾಹವನ್ನು ಎಲ್ಲರೂ ಪ್ರದರ್ಶಿಸಬೇಕು ಎಂದು ಕರೆ ನೀಡಿದರು.
ಇನ್ನೋರ್ವ ಮುಖ್ಯ ಅತಿಥಿ ಆಳ್ವಾಸ್ ಎಜ್ಯುಕೇಶನ್ ಆಡಳಿತ ಮಂಡಳಿಯ ಟ್ರಸ್ಟಿ ವಿವೇಕ್ ಆಳ್ವ, ಇಂತಹ ಸಾಹಸ ಕ್ರೀಡೆಗಳಿಗೆ, ಸಾಹಸಿಕರಿಗೆ ಸಾಕಷ್ಟು ಪ್ರೋತ್ಸಾಹದ ಅಗತ್ಯವಿದೆ. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಗಮನಹರಿಸಬೇಕು ಎಂದರಲ್ಲದೆ, ಡಿಸೆಂಬರ್ ನಲ್ಲಿ ಆಯೋಜಿಸಲು ಉದ್ದೇಶಿಸಿರುವ ವಿಶೇಷ ಮಾದರಿಯ ಮೋಟರ್ ಸ್ಪೋಟ್ಸ್ ಸ್ಪರ್ಧೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಪ್ರಕಟಿಸಿದರು.
ಇದೇವೇಳೆ ಅಂತರ್ ರಾಷ್ಟ್ರೀಯ, ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಮೋಟರ್ ಸ್ಪೋಟ್ಸ್ ಈವೆಂಟ್ ಗಳಲ್ಲಿ ಸಾಧನೆ ಮಾಡಿರುವ ಮೂಸಾ ಶರೀಫ್, ಅಶ್ವಿನ್ ನಾಯಕ್, ಅರುಣ್ ಅರ್ಜುನ್ ರಾವ್, ಅರುಣ್ ವಿಕ್ರಂ ರಾವ್, ಪ್ರತಿಜ್ಞಾ ಶೆಟ್ಟಿ, ಆಕಾಶ್ ಐತಾಳ್, ಡಾ.ಸತೀಶ್ ರಘುನಾಥ್, ಇಶಾನ್ ಚಂದ್ರ, ನಿತೇಶ್ ಜಿ. ಪೂಜಾರಿಯವರನ್ನು ಸನ್ಮಾನಿಸಲಾಯಿತು.
ಸ್ಪರ್ಧೆಯ ವಿವಿಧ ವಿಭಾಗಗಳಲ್ಲಿ 1ರಿಂದ 5ನೇ ಸ್ಥಾನದವರೆಗೆ ಸಾಧನೆ ಮಾಡಿರುವ ತಂಡಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಎಪಿಎಂಸಿ ಮಾಜಿ ಅಧ್ಯಕ್ಷ ಜೆ.ಕೃಷ್ಣರಾಜ ಹೆಗ್ಡೆ, ಶ್ರೀ ಮಹಾವೀರ ಕಾಲೇಜಿನ ಪ್ರಾಂಶುಪಾಲ ಡಾ.ರಾಧಾಕೃಷ್ಣ, ಪವರ್ ಪಾಯಿಂಟ್ ಬ್ಯಾಟರಿಯ ಮಹೇಂದ್ರ ವರ್ಮ ಜೈನ್, ಪುರಸಭೆ ಮಾಜಿ ಅಧ್ಯಕ್ಷ ಪ್ರಸಾದ್ ಕುಮಾರ್, ಸದಸ್ಯ ಸುರೇಶ್ ಕೋಟ್ಯಾನ್, ಆತಿಥೇಯ ಸಂಸ್ಥೆಗಳ ಪದಾಧಿಕಾರಿಗಳಾದ ಕುಲದೀಪ್ ಎಂ., ಅಭಿಜಿತ್ ಎಂ., ಪ್ರತಾಪ್ ಕುಮಾರ್, ಬೆದ್ರ ಅಡ್ವೆಂಚರ್ ಕ್ಲಬ್ ಅಧ್ಯಕ್ಷ ಅಕ್ಷಯ್ ಜೈನ್, ವಿನಯ ಕುಮಾರ್, ಮುಹಮ್ಮದ್ ಅರ್ಷದ್ ಮಾರ್ನಾಡ್ ಮತ್ತಿತರರು ಉಪಸ್ಥಿತರಿದ್ದರು.
ಚೆಂಗಪ್ಪ ಎ.ಡಿ. ಕಾರ್ಯಕ್ರಮ ನಿರೂಪಿಸಿದರು.