ಖ್ಯಾತ ಗಾಯಕಿ ಎಸ್.ಜಾನಕಿ ಪುತ್ರ ಮುರಳಿ ಕೃಷ್ಣ ನಿಧನ
Update: 2026-01-23 22:34 IST
ಮುರಳಿ ಕೃಷ್ಣ
ಮೈಸೂರು: ಖ್ಯಾತ ಚಲನಚಿತ್ರ ಗಾಯಕಿ ಎಸ್.ಜಾನಕಿ ಅವರ ಪುತ್ರ ಮುರಳಿ ಕೃಷ್ಣ (55) ನಿಧನರಾಗಿದ್ದಾರೆ.
ಅವರು ಮೈಸೂರಿನ ಬೋಗಾದಿಯಲ್ಲಿ ತನ್ನ ತಾಯಿ ಎಸ್.ಜಾನಕಿ ಅವರೊಂದಿಗೆ ವಾಸವಾಗಿದ್ದರು.
ಅನಾರೋಗ್ಯಕ್ಕೀಡಾಗಿದ್ದ ಅವರು ಜ.21 ರ ಬುಧವಾರ ರಾತ್ರಿ ಅವರ ನಿವಾಸದಲ್ಲೇ ಅಸುನೀಗಿದ್ದಾರೆ. ಮೃತರು ತಾಯಿ, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಜ.22 ರ ಗುರುವಾರ ಮಧ್ಯಾಹ್ನ ಚಾಮುಂಡಿ ಬೆಟ್ಟದ ತಪ್ಪಲಿನ ರುದ್ರಭೂಮಿಯಲ್ಲಿ ನೆರವೇರಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.