ಸಿದ್ದರಾಮಯ್ಯನವರು ಚುನಾವಣಾ ರಾಜಕಾರಣ ಬಿಟ್ಟರೂ ಸಕ್ರಿಯ ರಾಜಕಾರಣದಲ್ಲಿ ಇರುತ್ತಾರೆ : ಸಚಿವ ಯತೀಂದ್ರ

Update: 2026-07-27 20:01 IST

ಮೈಸೂರು : ನಮ್ಮ ತಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚುನಾವಣಾ ರಾಜಕೀಯವನ್ನು ಬಿಟ್ಟರೂ ಸಕ್ರಿಯ ರಾಜಕಾರಣದಲ್ಲಿ ಕೊನೆಯವರೆಗೂ ಇರುತ್ತಾರೆ ಎಂದು ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.

ಮಾಜಿ ಸಿಎಂ ಸಿದ್ದರಾಮಯ್ಯ ಅವರು ಚುನಾವಣಾ ರಾಜಕಾರಣದಿಂದ ನಿವೃತ್ತಿ ಘೋಷಿಸಿರುವ ಬಗ್ಗೆ ಸೋಮವಾರ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಮೊದಲನಿಂದಲೂ 2028ರ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಹೇಳಿದ್ದಾರೆ. ಚುನಾವಣಾ ರಾಜಕೀಯ ಬಿಟ್ಟರೂ ಸಕ್ರಿಯ ರಾಜಕಾರಣದಲ್ಲಿ ಕೊನೆಯವರೆಗೂ ಇರುತ್ತಾರೆ. ರಾಜ್ಯದ ಶೋಷಿತರ ಧ್ವನಿಯಾಗಿ ಇರುತ್ತಾರೆ. ತಂದೆಯವರು ಗಟ್ಟಿ ನಿರ್ಧಾರ ಮಾಡಿದ್ದಾರೆ. ಅದನ್ನು ಬದಲಾಯಿಸಿ ಅಂತ ಹೇಳುವುದಕ್ಕೆ ಅಗುವುದಿಲ್ಲ. ಅವರಿಗೆ ವಯಸ್ಸಾಗಿದೆ. ಅವರ ಆರೋಗ್ಯದ ಮೇಲೆ ಕಾಳಜಿ ವಹಿಸಲಿ ಎಂದು ಹೇಳಿದರು.

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜಿನಾಮೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಕೇಂದ್ರ ಸರಕಾರ ಎಷ್ಟೋ ವರ್ಷದಿಂದ ಏನೇ ಹಗರಣ ಮಾಡಿದರೂ ಸಚಿವರ ಕೈಯಲ್ಲಿ ರಾಜಿನಾಮೆ ಕೊಡಿಸುತ್ತಿರಲಿಲ್ಲ. ಜನರು ಎಷ್ಟೇ ಆಕ್ಷೇಪಣೆ ಮಾಡಿದರೂ ನಾವು ಮಾತ್ರ ರಾಜೀನಾಮೆ ಕೊಡುವುದಿಲ್ಲ ಎನ್ನುವಂತೆ ಇದ್ದರು. ಬಿಜೆಪಿಯವರ ಮನಸ್ಥಿತಿ ಜನರಿಗೆ ನಾವು ಹೆದರುವುದಿಲ್ಲ ಎನ್ನುವಂತೆ ಇತ್ತು. ಶಿಕ್ಷಣ ಸಚಿವರ ರಾಜೀನಾಮೆ ಕೇಂದ್ರ ಸರಕಾರಕ್ಕೆ ಒಂದು ಪಾಠವಾಗಿದೆ ಎಂದರು.

ಕೆಪಿಎಸ್‌ಸಿ ಹಗರಣ: ಬಿಜೆಪಿಯದ್ದು ಯಾವಾಗಲೂ ಡಬಲ್ ಸ್ಟ್ಯಾಂಡ್:

ಕೆಪಿಎಸ್‌ಸಿ ಹಗರಣ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವರು, ಕೆಪಿಎಸ್‌ಸಿ ಅಧ್ಯಕ್ಷರನ್ನು ನೇಮಕ ಮಾಡಿದ್ದು ಬಿಜೆಪಿ ಸರಕಾರ‌. ಅವರನ್ನು ಬದಲಾಯಿಸುವ ಅಧಿಕಾರವೂ ಸರಕಾರಕ್ಕೆ ಇರಲಿಲ್ಲ. ರಾಜ್ಯಪಾಲರ ಮೂಲಕ ಅವರ ವಜಾ ಆಗಿದೆ. ಈಗ ಅಂತಹ ಭ್ರಷ್ಟನ ಪರವಾಗಿ ಬಿಜೆಪಿಯ ಬೆಂಬಲಿತ ವಕೀಲರೇ ಕೋರ್ಟ್‌ಗೆ ಹೋಗಿದ್ದಾರೆ. ಬಿಜೆಪಿಯದ್ದು ಯಾವಾಗಲೂ ಡಬಲ್ ಸ್ಟ್ಯಾಂಡ್ ಎಂದು  ವಾಗ್ದಾಳಿ ನಡೆಸಿದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News