"ನನ್ನ ಇಬ್ಬರು ಮಕ್ಕಳು ಅಂತ್ಯಸಂಸ್ಕಾರ ಮಾಡುವಂತಿಲ್ಲ": ಎಸ್.ಎಲ್. ಭೈರಪ್ಪ ಅಂತ್ಯಕ್ರಿಯೆಗೆ ಗೊಂದಲದ ವಾತವರಣ ಸೃಷ್ಟಿ
ಮೈಸೂರು: ಲೇಖಕ ಎಸ್.ಎಲ್.ಭೈರಪ್ಪ ಅವರು ತಮ್ಮ ವಿಲ್‌ನಲ್ಲಿ ಅವರ ಮಕ್ಕಳಾದ ಉದಯ ಶಂಕರ್ ಮತ್ತು ರವಿಶಂಕರ್ ಅಂತ್ಯಕ್ರಿಯೆ ನಡೆಸುವಂತಿಲ್ಲ. ನನ್ನ ಅಂತ್ಯ ಸಂಸ್ಕಾರವನ್ನು ಮೈಲಸಂದ್ರದ, ಉತ್ತರಹಳ್ಳಿ ಕೆಂಗೇರಿ ರಸ್ತೆಯ ದುರ್ಗಾನಗರ ಲೇಔಟ್‌ನ ಮನೆ ನಂ.61 ನಭದ ನಿವಾಸಿ ಸುದರ್ಶನ್ ಪತ್ನಿ ಸಹನ ವಿಜಯ್‌ಕುಮಾರ್ ಮಾಡತಕ್ಕದ್ದು ಎಂದು ಭೈರಪ್ಪ ಬರೆದಿದ್ದಾರೆ ಎನ್ನಲಾದ ಪ್ರತಿಯನ್ನು ಮಾಜಿ ಸಂಸದ ಪ್ರತಾಪ ಸಿಂಹ ಅವರಿಗೆ ಫಣೀಶ್ ಎಂಬವರು ಪ್ರದರ್ಶಿಸಿದರು.
ವಿಲ್‌ನಲ್ಲಿ ಬರೆದಿರುವಂತೆಯೇ ಅಂತ್ಯಕ್ರಿಯೆ ಮಾಡಬೇಕು ಎಂದು ಕೆಲವರು ಒತ್ತಾಯಿಸಿದ್ದರಿಂದ ಕೆಲಕಾಲ ಗೊಂದಲದ ಸ್ಥಿತಿ ನಿರ್ಮಾಣವಾಗಿತ್ತು. ಈ ವೇಳೆ ಫಣೀಶ್ ಅವರನ್ನು ಪೊಲೀಸರು ವಶಕ್ಕೆ ಪಡೆಯಲು ಮುಂದಾದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಫಣೀಶ್, "ಭೈರಪ್ಪ ಅವರು ಬರೆದಿರುವುದನ್ನು ಹೇಳಿದ್ದೇನೆ. ನಾನೇನು ತಪ್ಪು ಮಾಡಿದೆ" ಎಂದು ಪ್ರಶ್ನಿಸಿದ್ದಾರೆ.
ಈ ವೇಳೆ ಫಣೀಶ್ ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಇದರಿಂದ ಕೆಲಗಾಲ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು.