ಅಕ್ರಮ ಹಣ ವರ್ಗಾವಣೆ ಪ್ರಕರಣ | ಸಮಾಜವಾದಿ ಪಕ್ಷದ ನಾಯಕ ಅಝಂ ಖಾನ್ ಜೈಲಿನಿಂದ ಬಿಡುಗಡೆ
ಅಝಂ ಖಾನ್ |Photo Credit : PTI
ಘಾಝಿಯಾಬಾದ್ (ಉತ್ತರ ಪ್ರದೇಶ): ಸಮಾಜವಾದಿ ಪಕ್ಷದ ನಾಯಕ ಅಝಂ ಖಾನ್ ಅವರು ಅಗತ್ಯ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ಬಳಿಕ ಬುಧವಾರ ಸಂಜೆ ಗಾಝಿಯಾಬಾದ್‌ನ ದಸ್ನಾ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಅವರು ತಮ್ಮ ತವರು ನಗರವಾದ ರಾಮ್‌ಪುರಕ್ಕೆ ತೆರಳಲಿದ್ದಾರೆ.
ಅಝಂ ಖಾನ್ ಬಿಡುಗಡೆಯ ವೇಳೆ ಅವರ ಪುತ್ರ ಅಬ್ದುಲ್ಲಾ ಅಝಂ ಖಾನ್ ಕಾರಾಗೃಹದ ಬಳಿ ಉಪಸ್ಥಿತರಿದ್ದರು.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಅಝಂ ಖಾನ್ ಅವರಿಗೆ ಅಲಹಾಬಾದ್ ಹೈಕೋರ್ಟ್ ನೀಡಿರುವ ಮಧ್ಯಂತರ ಜಾಮೀನಿಗೆ ತಡೆ ನೀಡಲು ಸುಪ್ರೀಂ ಕೋರ್ಟ್ ಬುಧವಾರ ನಿರಾಕರಿಸಿತ್ತು.