×
Ad

ಪಾಕ್ ಜೊತೆಗಿನ ಸಿಂಧೂ ಜಲ ಒಪ್ಪಂದ ಮರುಸ್ಥಾಪನೆ ಇಲ್ಲ: ಅಮಿತ್ ಶಾ

Update: 2025-06-22 07:35 IST

PC: PTI

ಹೊಸದಿಲ್ಲಿ: ಪಾಕಿಸ್ತಾನ ಜತೆಗಿನ ಸಿಂಧೂ ಜಲ ಒಪ್ಪಂದದ ಮರುಸ್ಥಾಪನೆ ಇಲ್ಲ ಎಂದು ಗೃಹ ಸಚಿವ ಅಮಿತ್ ಶಾ ಸ್ಪಷ್ಟಪಡಿಸಿದ್ದಾರೆ. ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿ ಬಳಿಕ ಈ ಒಪ್ಪಂದವನ್ನು ಅಮಾನತುಗೊಳಿಸಲಾಗಿತ್ತು. ಈ ದಾಳಿಯಲ್ಲಿ ಪ್ರವಾಸಿಗರು ಸೇರಿದಂತೆ ಹಲವು ಮಂದಿ ನಾಗರಿಕರು ಮೃತಪಟ್ಟಿದ್ದು, ಪಾಕಿಸ್ತಾನಿ ಬೆಂಬಲಿತ ಗುಂಪುಗಳು ಈ ದಾಳಿ ನಡೆಸಿವೆ ಎಂಬ ಆರೋಪವನ್ನು ಪಾಕ್ ನಿರಾಕರಿಸಿತ್ತು.

1960ರ ಸಿಂಧೂ ಜಲ ಒಪ್ಪಂದ ಭಾರತದ ಪಾಲಿಗೆ ನ್ಯಾಯಸಮ್ಮತವಲ್ಲ ಎಂದು ಬಣ್ಣಿಸಿದ ಅಮಿತ್ ಶಾ, ಈ ಒಪ್ಪಂದದ ಪುನಃಸ್ಥಾಪನೆಯ ಯವುದೇ ಸಾಧ್ಯತೆ ಇಲ್ಲ ಎಂದು ಟೈಮ್ಸ್ ಆಫ್ ಇಂಡಿಯಾದಲ್ಲಿ ಶನಿವಾರ ಪ್ರಕಟವಾದ ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದಾರೆ.

"ಒಪ್ಪಂದದ ಮರುಸ್ಥಾಪನೆ ಇಲ್ಲ. ಪಾಕಿಸ್ತಾನಕ್ಕೆ ಹರಿಯುವ ನೀರನ್ನು ಕಾಲುವೆ ನಿರ್ಮಿಸುವ ಮೂಲಕ ರಾಜಸ್ಥಾನಕ್ಕೆ ಹರಿಸಲಿದ್ದೇವೆ. ನ್ಯಾಯಸಮ್ಮತವಲ್ಲದ ರೀತಿಯಲ್ಲಿ ಪಾಕಿಸ್ತಾನ ಪಡೆಯುತ್ತಿದ್ದ ನೀರಿನಿಂದ ವಂಚಿತವಾಗಲಿದೆ" ಎಂದು ವಿವರಿಸಿದರು.

ವಿಶ್ವಬ್ಯಾಂಕ್ ಮಧ್ಯಸ್ಥಿಕೆಯಲ್ಲಿ ನಡೆದ ಸಿಂಧೂ ಜಲ ಒಪ್ಪಂದದಲ್ಲಿ ಪಶ್ಚಿಮಾಭಿಮುಖವಾಗಿ ಹರಿಯುವ ಸಿಂಧೂ, ಜೇಲಂ ಮತ್ತು ಚೆನಾಬ್ ನದಿಗಳ ನೀರನ್ನು ಪಾಕಿಸ್ತಾನಕ್ಕೆ ಹಾಗೂ ಪೂರ್ವಾಭಿಮುಖವಾಗಿ ಹರಿಯುವ ಬಿಯಾಸ್, ರಾವಿ ಮತ್ತು ಸಟ್ಲೇಜ್ ನದಿ ನೀರನ್ನು ಭಾರತಕ್ಕೆ ಹಂಚಿಕೆ ಮಾಡಲಾಗಿದೆ. ಜಲವಿದ್ಯುತ್ ಮತ್ತು ನೀರಾವರಿಯ ಬಗ್ಗೆ ಪರಸ್ಪರ ಸಹಕಾರದ ಒಪ್ಪಂದಗಳಿಗೆ ಅನುವು ಮಾಡಿಕೊಡಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News