ಪಂಜಾಬ್:ಬಿಜೆಪಿ ಕಚೇರಿಯತ್ತ ಪೆಟ್ರೋಲ್ ಬಾಂಬ್ ಎಸೆತ

Update: 2026-07-27 21:14 IST

Photo Credit ; NDTV 

ಅಂಡಿಗಡ,ಜು.27: ಸೋಮವಾರ ಬೆಳಗಿನ ಜಾವ ಪಂಜಾಬಿನ ಸಂಗ್ರೂರ್‌ನಲ್ಲಿ ಬಿಜೆಪಿ ಕಚೇರಿಯ ಮೇಲೆ ಪೆಟ್ರೋಲ್ ಬಾಂಬ್ ದಾಳಿ ನಡೆದಿದ್ದು,ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ದಾಳಿಯಿಂದಾಗಿ ಕಟ್ಟಡದ ಹೊರಗೋಡೆಯ ಮೇಲೆ ಸುಟ್ಟ ಗುರುತುಗಳು ಕಂಡುಬಂದಿವೆಯಾದರೂ,ಯಾವುದೇ ಗಾಯಗಳು ಸಂಭವಿಸಿಲ್ಲ.

ಪೊಲೀಸರ ಪ್ರಕಾರ,ನಸುಕಿನ ಮೂರು ಗಂಟೆಯ ಸುಮಾರಿಗೆ ಅಪರಿಚಿತ ವ್ಯಕ್ತಿಯೋರ್ವ ಪೆಟ್ರೋಲ್ ತುಂಬಿದ ಗಾಜಿನ ಬಾಟಲಿಯನ್ನು ಬಿಜೆಪಿ ಕಚೇರಿಯತ್ತ ತೂರಿದ್ದಾನೆ. ಬಾಟಲಿ ಕಟ್ಟಡದ ಹೊರಗೋಡೆಗೆ ಬಡಿದು ಬೆಂಕಿ ಹೊತ್ತಿಕೊಂಡಿದೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಸಂಗ್ರೂರ್ ಎಸ್‌ಪಿ ದಿವೇಂದ್ರ ಅತ್ರಿ,ಘಟನೆಯ ಕುರಿತು ವಿವರವಾದ ತನಿಖೆ ನಡೆಯುತ್ತಿದೆ. ಅಪರಾಧಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದು ತಿಳಿಸಿದರು.

ಈ ಘಟನೆಗೆ ಪ್ರತಿಕ್ರಿಯಿಸಿದ ಬಿಜೆಪಿ ನಾಯಕರು ದಾಳಿಯು ಪೂರ್ವನಿಯೋಜಿತ ಎಂದು ಆರೋಪಿಸಿದ್ದಲ್ಲದೆ,ಪಂಜಾಬ್ ಸರಕಾರದ ಕಾನೂನು ಮತ್ತು ಸುವ್ಯವಸ್ಥೆಯ ನಿರ್ವಹಣೆಯನ್ನು ಪ್ರಶ್ನಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News