×
Ad

ರಾಮಲೀಲಾ ಕಾರ್ಯಕ್ರಮದಲ್ಲಿ ರಾಮನ ಪಾತ್ರ ನಿರ್ವಹಿಸುತ್ತಿದ್ದ ಪಾತ್ರಧಾರಿ ವೇದಿಕೆಯ ಮೇಲೆಯೇ ಕುಸಿದು ಮೃತ್ಯು

Update: 2024-10-06 15:01 IST
PC : X

ಹೊಸದಿಲ್ಲಿ: ರಾಮಲೀಲಾ ಕಾರ್ಯಕ್ರಮದಲ್ಲಿ ರಾಮನ ಪಾತ್ರ ನಿರ್ವಹಿಸುತ್ತಿದ್ದ ಪಾತ್ರಧಾರಿಯೊಬ್ಬರು ವೇದಿಕೆಯ ಮೇಲೆಯೇ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ದಿಲ್ಲಿಯಲ್ಲಿ ನಡೆದಿದೆ.

ದಿಲ್ಲಿಯ ಶಾದರದಲ್ಲಿನ ಜೈ ಶ್ರೀ ರಾಮ್ ಲೀಲಾ ವಿಶ್ವಕರ್ಮ ನಗರ್ ನಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು 45 ವರ್ಷದ ಸುಶೀಲ್ ಕೌಶಿಕ್ ಎಂದು ಗುರುತಿಸಲಾಗಿದ್ದು, ಅವರು ಶ್ರೀ ರಾಮನ ಪಾತ್ರ ನಿರ್ವಹಿಸುತ್ತಿದ್ದರು ಎಂದು ಹೇಳಲಾಗಿದೆ.

ವೈರಲ್ ಆಗಿರುವ ಈ ಘಟನೆಯ ವಿಡಿಯೊದಲ್ಲಿ, ಕೌಶಿಕ್ ತಮ್ಮ ಪಾಲಿನ ಸಾಲುಗಳನ್ನು ಪ್ರಸ್ತುತಪಡಿಸುವಾಗ, ದಿಢೀರನೇ ತಮ್ಮ ಎದೆ ಹಿಡಿದುಕೊಂಡು ವೇದನೆ ಅನುಭವಿಸಿದ್ದಾರೆ. ನಂತರ, ವೇದಿಕೆಯ ಹಿಂಭಾಗಕ್ಕೆ ತೆರಳಿರುವ ಅವರು, ಅಲ್ಲಿಯೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

ಕೌಶಿಕ್ ಹೃದಯಾಘಾತಕ್ಕೆ ತುತ್ತಾಗಿದ್ದು, ಅವರನ್ನು ಕೂಡಲೇ ಆನಂದ್ ವಿಹಾರ್ ನಲ್ಲಿರುವ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News