ಜಿಪಂ, ತಾಪಂ ಚುನಾವಣೆ : ಕೊಡಗಿನಲ್ಲಿ ಟಿಕೆಟ್ ಆಕಾಂಕ್ಷಿಗಳಿಗೆ ಮತ್ತೆ ಆಘಾತ ನೀಡಿದ ಅಂತಿಮ ಮೀಸಲು
ಮಡಿಕೇರಿ : ಕುತೂಹಲ ಕೆರಳಿಸಿದ್ದ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಯ ಕ್ಷೇತ್ರವಾರು ಅಂತಿಮ ಮೀಸಲು ಅಧಿಸೂಚನೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಕಟಿಸಿದೆ. ಅ.9ರಂದು ಕರಡು ಮೀಸಲು ಪಟ್ಟಿ ಪ್ರಕಟಿಸಲಾಗಿತ್ತು.ನಂತರ ಅ.19ವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಇದೀಗ ಆಕ್ಷೇಪಣೆ ಅವಧಿ ಮುಗಿದ ಒಂದು ತಿಂಗಳ ಬಳಿಕ ಅಂತಿಮ ಮೀಸಲು ಅಧಿಸೂಚನೆ ಪ್ರಕಟಗೊಂಡಿದೆ.
ಕೊಡಗು ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯತ್ ಕ್ಷೇತ್ರಗಳ ಮೀಸಲಾತಿ ಬದಲಾವಣೆ ಆಗಲಿದೆ ಎಂಬ ರಾಜಕೀಯ ಲೆಕ್ಕಾಚಾರ ನಡೆದಿತ್ತು. ಆದರೆ ಕರಡು ಪಟ್ಟಿಯಲ್ಲಿದ್ದ ಮೀಸಲಾತಿಯನ್ನೇ ಅಂತಿಮ ಅಧಿಸೂಚನೆಯಲ್ಲಿ ಕೂಡ ಪ್ರಕಟಿಸಿ ಜಿಲ್ಲೆಯಲ್ಲಿ ಯಥಾಸ್ಥಿತಿ ಮುಂದುವರಿಸಿದೆ. ಟಿಕೆಟ್ ಆಕಾಂಕ್ಷಿಗಳಿಗೆ ಮತ್ತೆ ನಿರಾಸೆಯುಂಟಾಗಿದೆ.
ಕ್ಷೇತ್ರವಾರು ಕರಡು ಮೀಸಲು ಪಟ್ಟಿ ಪ್ರಕಟಗೊಂಡ ಬಳಿಕ ಜಿಲ್ಲೆಯಲ್ಲಿ ಅಸಮಾಧಾನ ವ್ಯಕ್ತವಾಗಿತ್ತು. ಆಕ್ಷೇಪವೂ ಸಲ್ಲಿಕೆಯಾಗಿತ್ತು.ಅದಲ್ಲದೇ ಕುಶಾಲನಗರ ತಾಲೂಕಿಗೆ ಒಂದೇ ಒಂದು ಸಾಮಾನ್ಯ ಮೀಸಲು ನಿಗದಿಯಾಗದಿರುವುದಕ್ಕೆ ದೊಡ್ಡ ಮಟ್ಟದ ಆಕ್ಷೇಪ ವ್ಯಕ್ತವಾಗಿತ್ತು.
ಮೀಸಲಾತಿಗೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ. ಶಶಿಧರ್ ರಾಜಕೀಯ ನಿವೃತ್ತಿ ಘೋಷಿಸಿದ್ದರು. ಅದಲ್ಲದೇ ಕಾಂಗ್ರೆಸ್ ಮುಸ್ಲಿಮ್ ಸಮುದಾಯದ ಮುಖಂಡರು ಬಹಿರಂಗವಾಗಿ ಸಭೆ ನಡೆಸಿ ಕರಡು ಮೀಸಲು ಪಟ್ಟಿಗೆ ಆಕ್ಷೇಪ ವ್ಯಕ್ತಪಡಿಸಿದ್ದರು.
ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಮೀಸಲಾತಿ ಬದಲಾಗಬಹುದೆಂಬ ಚರ್ಚೆಗಳು ನಡೆದಿತ್ತು. ಆದರೆ ಯಾವುದೇ ರೀತಿಯಲ್ಲಿ ಬದಲಾವಣೆ ಆಗಿಲ್ಲ. ಕುಶಾಲನಗರ ತಾಲೂಕು ವ್ಯಾಪ್ತಿಯ ಜಿಲ್ಲಾ ಪಂಚಾಯತ್ ಕ್ಷೇತ್ರಗಳಲ್ಲಿ ಒಂದೇ ಒಂದು ಸಾಮಾನ್ಯ ಮೀಸಲು ನಿಗದಿಯಾಗಿಲ್ಲ.
ಜಿಪಂ ಪ್ರಾದೇಶಿಕ ಕ್ಷೇತ್ರಗಳ ಮೀಸಲಾತಿ ಪಟ್ಟಿ
ಮಕ್ಕಂದೂರು-ಸಾಮಾನ್ಯ (ಮಹಿಳೆ),ಕಾಂತೂರು ಮೂರ್ನಾಡು-ಅನುಸೂಚಿತ ಜಾತಿ (ಮಹಿಳೆ), ನಾಪೊಕ್ಲು-ಹಿಂದುಳಿದ ವರ್ಗ ಅ (ಮಹಿಳೆ), ಸಂಪಾಜೆ-ಸಾಮಾನ್ಯ, ಭಾಗಮಂಡಲ-ಅನುಸೂಚಿತ ಪಂಗಡ, ಚೆಯ್ಯಂಡಾಣೆ (ನರಿಯಂದಡ) - ಸಾಮಾನ್ಯ, ಬೆಟ್ಟಗೇರಿ-ಸಾಮಾನ್ಯ (ಮಹಿಳೆ), ಗೋಪಾಲಪುರ- ಸಾಮಾನ್ಯ (ಮಹಿಳೆ), ಕೊಡ್ಲಿಪೇಟೆ - ಅನುಸೂಚಿತ ಜಾತಿ, ಅಬ್ಬೂರುಕಟ್ಟೆ - ಹಿಂದುಳಿದ ವರ್ಗ ಬ (ಮಹಿಳೆ),ಶಾಂತಳ್ಳಿ - ಸಾಮಾನ್ಯ, ಬೆಳ್ಳೂರು ಬಸವನಹಳ್ಳಿ - ಸಾಮಾನ್ಯ (ಮಹಿಳೆ),ಮಾದಾಪುರ - ಸಾಮಾನ್ಯ, ಹೆಬ್ಬಾಲೆ - ಹಿಂದುಳಿದ ವರ್ಗ ಅ, ಕೂಡಿಗೆ -ಸಾಮಾನ್ಯ ಮಹಿಳೆ, ಗುಡ್ಡೆಹೊಸೂರು-ಹಿಂದುಳಿದ ವರ್ಗ ಅ, ವಾಲ್ನೂರು ತ್ಯಾಗತ್ತೂರು-ಹಿಂದುಳಿದ ವರ್ಗ ಅ (ಮಹಿಳೆ), ಸುಂಟಿಕೊಪ್ಪ-ಅನುಸೂಚಿತ ಜಾತಿ (ಮಹಿಳೆ), ಬಿಟ್ಟಂಗಾಲ-ಹಿಂದುಳಿದ ವರ್ಗ ಅ,ಅಮ್ಮತ್ತಿ- ಅನುಸೂಚಿತ ಜಾತಿ, ಚೆನ್ನಯ್ಯನಕೋಟೆ-ಅನುಸೂಚಿತ ಪಂಗಡ (ಮಹಿಳೆ), ಸಿದ್ದಾಪುರ-ಸಾಮಾನ್ಯ (ಮಹಿಳೆ),ಹಾಲುಗುಂದ-ಸಾಮಾನ್ಯ,ಬಾಳೆಲೆ -ಸಾಮಾನ್ಯ (ಮಹಿಳೆ),ಗೋಣಿಕೊಪ್ಪಲು-ಸಾಮಾನ್ಯ,ತಿತಿಮತಿ -ಸಾಮಾನ್ಯ, ಶ್ರೀಮಂಗಲ-ಅನುಸೂಚಿತ ಪಂಗಡ (ಮಹಿಳೆ),ಹುದಿಕೇರಿ-ಸಾಮಾನ್ಯ,ಟಿ ಶೆಟ್ಟಿಗೇರಿ- ಹಿಂದುಳಿದ ವರ್ಗ ಅ (ಮಹಿಳೆ).
ತಾಪಂ ಕ್ಷೇತ್ರಗಳ ಮೀಸಲಾತಿ
ಮಡಿಕೇರಿ ತಾಪಂ (12 ಕ್ಷೇತ್ರಗಳು): ಮಕ್ಕಂದೂರು -ಸಾಮಾನ್ಯ, ಕಡಗದಾಳು-ಅನುಸೂಚಿತ ಜಾತಿ (ಮಹಿಳೆ), ಕಾಂತೂರು ಮೂರ್ನಾಡು-ಸಾಮಾನ್ಯ (ಮಹಿಳೆ), ಹೊದ್ದೂರು-ಹಿಂದುಳಿದ ವರ್ಗ ಬ, ನಾಪೊಕ್ಲು-ಹಿಂದುಳಿದ ವರ್ಗ ಅ, ಎಮ್ಮೆಮಾಡು- ಸಾಮಾನ್ಯ, ಚೆಂಬು-ಸಾಮಾನ್ಯ, ಸಂಪಾಜೆ - ಸಾಮಾನ್ಯ, ಭಾಗಮಂಡಲ-ಅನುಸೂಚಿತ ಪಂಗಡ (ಮಹಿಳೆ), ಕುಂಜಿಲ (ಕಕ್ಕಬೆ) -ಹಿಂದುಳಿದ ವರ್ಗ ಅ (ಮಹಿಳೆ), ಹಾಕತ್ತೂರು - ಹಿಂದುಳಿದ ವರ್ಗ ಅ (ಮಹಿಳೆ), ಬೆಟ್ಟಗೇರಿ-ಸಾಮಾನ್ಯ (ಮಹಿಳೆ)
ಸೋಮವಾರಪೇಟೆ ತಾಪಂ (9 ಕ್ಷೇತ್ರಗಳು): ಹಂಡ್ಲಿ -ಅನುಸೂಚಿತ ಜಾತಿ (ಮಹಿಳೆ), ಕೊಡ್ಲಿಪೇಟೆ - ಹಿಂದುಳಿದ ವರ್ಗ ಅ (ಮಹಿಳೆ), ಶನಿವಾರಸಂತೆ -ಸಾಮಾನ್ಯ (ಮಹಿಳೆ), ಗೌಡಳ್ಳಿ-ಸಾಮಾನ್ಯ, ಅಬ್ಬೂರುಕಟ್ಟೆ - ಸಾಮಾನ್ಯ, ಹಾನಗಲ್ಲು-ಸಾಮಾನ್ಯ (ಮಹಿಳೆ), ಶಾಂತಳ್ಳಿ-ಸಾಮಾನ್ಯ, ಬೆಳ್ಳೂರು ಬಸವನಹಳ್ಳಿ -ಅನುಸೂಚಿತ ಪಂಗಡ (ಮಹಿಳೆ), ಮಾದಾಪುರ - ಅನುಸೂಚಿತ ಜಾತಿ.
ಕುಶಾಲನಗರ ತಾಪಂ (9 ಕ್ಷೇತ್ರಗಳು): ಹೆಬ್ಬಾಲೆ - ಅನುಸೂಚಿತ ಜಾತಿ (ಮಹಿಳೆ), ಕೂಡಿಗೆ - ಸಾಮಾನ್ಯ, ಕೂಡುಮಂಗಳೂರು - ಸಾಮಾನ್ಯ (ಮಹಿಳೆ), ಗುಡ್ಡೆಹೊಸೂರು - ಅನುಸೂಚಿತ ಪಂಗಡ (ಮಹಿಳೆ), ಕೊಡಗರಹಳ್ಳಿ - ಸಾಮಾನ್ಯ, ವಾಲ್ನೂರು ತ್ಯಾಗತ್ತೂರು - ಹಿಂದುಳಿದ ವರ್ಗ ಅ (ಮಹಿಳೆ), ನೆಲ್ಲಿಹುದಿಕೇರಿ - ಸಾಮಾನ್ಯ, ಅತ್ತೂರು ನಲ್ಲೂರು - ಸಾಮಾನ್ಯ (ಮಹಿಳೆ), ಸುಂಟಿಕೊಪ್ಪ - ಹಿಂದುಳಿದ ವರ್ಗ ಅ.
ವಿರಾಜಪೇಟೆ ತಾಲೂಕು ಪಂಚಾಯತ್ (9 ಕ್ಷೇತ್ರಗಳು): ಆರ್ಜಿ-ಹಿಂದುಳಿದ ವರ್ಗ ಅ, ಬಾಳುಗೋಡು-ಸಾಮಾನ್ಯ, ಹೊಸೂರು- ಸಾಮಾನ್ಯ, ಕಾರ್ಮಾಡು-ಸಾಮಾನ್ಯ (ಮಹಿಳೆ), ಚೆನ್ನಯ್ಯನಕೋಟೆ-ಅನುಸೂಚಿತ ಪಂಗಡ (ಮಹಿಳೆ), ಪಾಲಿಬೆಟ್ಟ-ಸಾಮಾನ್ಯ (ಮಹಿಳೆ), ಕರಡಿಗೋಡು - ಅನುಸೂಚಿತ ಜಾತಿ (ಮಹಿಳೆ), ಹಾಲುಗುಂದ- ಹಿಂದುಳಿದ ವರ್ಗ ಅ (ಮಹಿಳೆ), ಕೆದಮುಳ್ಳೂರು- ಸಾಮಾನ್ಯ
ಪೊನ್ನಂಪೇಟೆ ತಾಪಂ (9 ಕ್ಷೇತ್ರಗಳು): ತಿತಿಮತಿ -ಅನುಸೂಚಿತ ಪಂಗಡ, ಬಾಳೆಲೆ-ಅನುಸೂಚಿತ ಪಂಗಡ (ಮಹಿಳೆ), ಕೈಕೇರಿ-ಅನುಸೂಚಿತ ಜಾತಿ (ಮಹಿಳೆ), ಹೆಬ್ಬಾಲೆ-ಸಾಮಾನ್ಯ, ಗೋಣಿಕೊಪ್ಪಲು -ಸಾಮಾನ್ಯ (ಮಹಿಳೆ), ಕಿರುಗೂರು-ಅನುಸೂಚಿತ ಪಂಗಡ (ಮಹಿಳೆ), ಹುದಿಕೇರಿ-ಸಾಮಾನ್ಯ, ಶ್ರೀಮಂಗಲ- ಸಾಮಾನ್ಯ, ಟಿ.ಶೆಟ್ಟಿಗೇರಿ-ಸಾಮಾನ್ಯ (ಮಹಿಳೆ)