ಯುವತಿಯ ಅತ್ಯಾಚಾರ, ಕೊಲೆ ಪ್ರಕರಣ ಖಂಡಿಸಿ ರಾಯಚೂರಿನಲ್ಲಿ ಕ್ಯಾಂಡಲ್ ಮಾರ್ಚ್

Update: 2026-08-22 21:41 IST

ರಾಯಚೂರು: ಹೊಕ್ರಾಣಿ ಗ್ರಾಮದಲ್ಲಿ ನಡೆದಿದೆ ಎನ್ನಲಾದ ದಲಿತ ಯುವತಿ ಅಶ್ವಿನಿ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಖಂಡಿಸಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನಗರದಲ್ಲಿ ಕ್ಯಾಂಡಲ್ ಮಾರ್ಚ್ ನಡೆಸಲಾಯಿತು.

‘ಜಸ್ಟೀಸ್ ಫಾರ್ ಅಶ್ವಿನಿ’ ಹೆಸರಿನಲ್ಲಿ ಪ್ರಗತಿಪರ, ದಲಿತಪರ, ಎಡಪಕ್ಷಗಳು, ಮಹಿಳಾ ಸಂಘಟನೆಗಳು, ಜಾತ್ಯತೀತ ಹಾಗೂ ಸಮಾನ ಮನಸ್ಕ ಸಂಘಟನೆಗಳ ಮುಖಂಡರು ಮತ್ತು ನಾಗರಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ನಗರದ ತೀನ್ ಖಂದಿಲ್ ವೃತ್ತದಲ್ಲಿ ಮೇಣದಬತ್ತಿ ಹಿಡಿದು ಅಶ್ವಿನಿ ಅವರ ಆತ್ಮಕ್ಕೆ ಶಾಂತಿ ಕೋರಿದ ಪ್ರತಿಭಟನಾಕಾರರು, ಪ್ರಕರಣದ ಕುರಿತು ಆಕ್ರೋಶ ವ್ಯಕ್ತಪಡಿಸಿದರು.

ಅಶ್ವಿನಿ ಅವರ ಸಾವು ಅತ್ಯಂತ ಭೀಕರವಾಗಿದ್ದು, ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ. ಸರ್ಕಾರ ಕೇವಲ ಪರಿಹಾರ ನೀಡುವುದಕ್ಕೆ ಸೀಮಿತವಾಗದೆ, ಪ್ರಕರಣದ ಕುರಿತು ನಿಷ್ಪಕ್ಷಪಾತ ಹಾಗೂ ಸಮಗ್ರ ತನಿಖೆ ನಡೆಸಬೇಕು. ಆರೋಪಿಗಳು ತಪ್ಪಿತಸ್ಥರೆಂದು ಸಾಬೀತಾದರೆ ಕಠಿಣ ಕಾನೂನು ಶಿಕ್ಷೆ ವಿಧಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಈ ವೇಳೆ ಮಹಿಳಾ ಸಂಘಟನೆಗಳ ಮುಖಂಡರಾದ ವಿಜಯರಾಣಿ, ಮಹಿಳಾ ಮುನ್ನಡೆಯ ರಾಜ್ಯಾಧ್ಯಕ್ಷೆ ಚೆನ್ನಮ್ಮ, ಸಾಹೆರಾ ಬಾನು, ಹನುಮಂತ ಕೋಟೆ, ಹೋರಾಟಗಾರರಾದ ಎಂ.ಆರ್ ಬೇರಿ, ಶರಣ ಕುಮಾರ ಮುದ್ದಮಗುಡ್ಡಿ, ಖಾಜಾ‌ ಅಸ್ಲಂ ಅಹ್ಮೆದ್, ಆಂಜನೇಯ ಕುರುಬದೊಡ್ಡ, ಜಮಾತೆ ಇಸ್ಲಾಂ ಜಿಲ್ಲಾಧ್ಯಕ್ಷ ಅಸಿಮುದ್ದೀನ್ ಅಖ್ತರ್, ಎಐಡಿವೈಒ ಜಿಲ್ಲಾಧ್ಯಕ್ಷ ಚನ್ನಬಸವ ಜಾನೇಕಲ್, ಅಂಬೇಡ್ಕರ್ ಸೇನೆಯ ಅಧ್ಯಕ್ಷ ವಿಶ್ವನಾಥ ಪಟ್ಟಿ, ಕಾಂಗ್ರೆಸ್ ಯುವ ಮುಖಂಡ ಫೈಸಲ್ ಖಾನ್, ಡಿಎಸ್ ಎಸ್ ಮುಖಂಡ ನರಸಿಂಹಲು, ಭೀಮ್ ಆರ್ಮಿಯ ಪ್ರವೀಣ್ ರೆಡ್ಡಿ ಸೇರಿದಂತೆ ಮತ್ತಿತರರು ಇದ್ದರು



 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News