×
Ad

ದೇವದುರ್ಗ| ಭಾರತೀಯ ಯೋಧರಿಗೆ ಸ್ವಾಗ್ರಾಮದಲ್ಲಿ‌ ಅದ್ಧೂರಿ‌ ಸ್ವಾಗತ

Update: 2025-12-23 14:16 IST

ರಾಯಚೂರು: ಭಾರತೀಯ ಸೈನ್ಯಕ್ಕೆ ಆಯ್ಕೆಯಾದ ಹನುಮಂತರಾಯ ಹಾಗೂ ರಾಮಲಿಂಗ ಪೂಜಾರಿಗೆ ದೇವದುರ್ಗ ಪಟ್ಟಣದಲ್ಲಿ ಭರ್ಜರಿ ಸ್ವಾಗತ ನೀಡಲಾಯಿತು.

ದೇವದುರ್ಗ ಪಟ್ಟಣದಲ್ಲಿ ಸೋಮವಾರ ಸಂಜೆ ಭಾರತೀಯ ಸೈನ್ಯಕ್ಕೆ ಆಯ್ಕೆಯಾದ ಸೈನಿಕರಿಗೆ ಸಿರವಾರ ಕ್ರಾಸ್ ನಿಂದ ಡಾ.ಬಿ.ಆರ್.ಅಂಬೇಡ್ಕರ್‌ ವೃತ್ತದ ಮಾರ್ಗದಿಂದ ಹಜರ್ ಜಹೀರುದ್ದೀನ್ ಪಾಶಾ ವೃತ್ತದ ವರೆಗೆ ಮೆರವಣಿಗೆ  ಮೂಲಕ ಸೈನಿಕರ ಸಂಬಂಧಿಕರು ಮತ್ತು ಸೈನಿಕ ಅಕಾಡೆಮಿಯ ವತಿಯಿಂದ ವಿಜೃಂಭಣೆಯಿಂದ ಸ್ವಾಗತಿಸಲಾಯಿತು.

ಈ ಸಂದರ್ಭದಲ್ಲಿ ಸೈನಿಕ ಆಕಾಡೆಮಿಯ ಅಧ್ಯಕ್ಷರಾದ ಭಾನುಪ್ರಕಾಶ್ ಖೇಣೆದ್, ಸೈನಿಕ ಪಂಪಣ್ಣ ಅಕ್ಕರಕ್ಕಿ, ಸುಭಾಷ್ ಚಂದ್ರಪಾಟೀಲ್,ಬಾಲಪ್ಪ ಭಾವಿಮನಿ,ಶರಣಗೌಡ ಗೌರಂಪೇಟೆ ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News