×
Ad

ಸರ್ಕಾರಿ ಶಾಲೆಗಳ ವಿಲೀನದ ಹೆಸರಿನಲ್ಲಿ 700 ಕೆಪಿಸಿ ಶಾಲೆ ಆರಂಭ ವಿರೋಧಿಸಿ ಜ.25ರಿಂದ ಪಾದಯಾತ್ರೆ: ವಿದ್ಯಾ ಪಾಟೀಲ

Update: 2025-11-21 12:29 IST

ರಾಯಚೂರು: ಸರ್ಕಾರಿ ಶಾಲೆಗಳನ್ನು ವಿಲೀನದ ಹೆಸರಿನಲ್ಲಿ ಮಚ್ಚುಲು ಹೊರಟಿರುವ ರಾಜ್ಯ ಸರ್ಕಾರ ಕ್ರಮ ವಿರೋಧಿಸಿ ಖಾಯಂ ಶಿಕ್ಷಕರ ನೇಮಕಾತಿಗೆ ಆಗ್ರಹಿಸಿ ಬಸವಕಲ್ಯಾಣದಿಂದ ಕಲ್ಬುರ್ಗಿಯವರಗೆ ಪಾದಯಾತ್ರೆ ನಡೆಸಿ ಜ.25 ರಿಂದ ಅಹೋರಾತ್ರಿ ಧರಣಿ ನಡೆಸಲಾಗುತ್ತದೆ ಎಂದು ಶಾಲಾ ಅಭಿವೃದ್ದಿ ವೇದಿಕೆ ಸಂಚಾಲಕಿ ವಿದ್ಯಾ ಪಾಟೀಲ್ ಹೇಳಿದರು.

ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳನ್ನು ಮುಚ್ಚುವದಿಲ್ಲ ಎಂದು ಹೇಳುತ್ತಿರುವ ಸರ್ಕಾರ 700 ಕೆಪಿಸಿ ಶಾಲೆಗಳನ್ನು ಪ್ರಾರಂಭಿಸಿ ಶಾಲೆಗಳನ್ನು ಮುಚ್ಚಲು ಮುನ್ನಡಿ ಬರೆದಿದೆ.

ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ 200 ಕೆಪಿಎಸ್ ಶಾಲೆಗಳನ್ನು ಪ್ರಾರಂಭಿಸುವದಾಗಿ ಹೇಳುತ್ತಿದೆ. ಹೊಸಶಾಲೆ ಪ್ರಾರಂಭಿಸಿ ಮಕ್ಕಳ ಸಂಖ್ಯೆ ಕಡಿಮೆಯಿರುವ ಶಾಲೆಗಳನು ವಿಲೀನ ಮಾಡಿ ಶಾಲೆಗಳನ್ನು ಶಾಶ್ವತವಾಗಿ ಮುಚ್ಚುವ ನಿರ್ಧಾರಕ್ಕೆ ಶಾಲಾ ಶಿಕ್ಷಣ ಇಲಾಖೆ ಬಂದಿದೆ. ಈಗಾಗಲೇ ಚನ್ನಪಟ್ಟಣದಲ್ಲಿ ಶಾಲೆಗಳ ವಿಲೀನ್ ಪ್ರಕ್ರಿಯೆ‌ಪ್ರಾರಂಭಗೊಂಡಿದೆ.

ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸಲು ಶಾಲೆಗಳನ್ನು ಸಹ ಗುರುತಿಸಲಾಗಿದೆ. ಕಳೆದ ಎರಡು ವರ್ಷಗಳಿಂದ ವಿವಿಧ ಹಂತದ ಹೋರಾಟ ನಡೆಸಿ ಸಚಿವರು, ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಮನವಿ ನೀಡಲಾಗಿದೆ. ಸರ್ಕಾರ ಯಾವುದೇ ಸ್ಪಂದನೆ ದೊರೆತಿಲ್ಲ. ಬದಲಾಗಿ ಶಾಲೆಗಳನು ಮುಚ್ಚುವಪ್ರಯತ್ನ‌ ತೀವ್ರಗೊಳಿಸಲಾಗಿದೆ. 700 ಹೊಸ ಕೆಪಿಎಸ್ ಶಾಲೆಗಳು ಪ್ರಾರಂಭಗೊಂಡದೆ ಸರಿಸುಮಾರು 25 ಸಾವಿರ ಸರ್ಕಾರಿ ಶಾಲೆಗಳು ಮುಚ್ಚುವ ಸಾಧ್ಯತೆಯಿದೆ.

ಕೂಡಲೇ ಶಾಲೆಗಳ ವಿಲೀನ ಪ್ರಕ್ರಿಯೆ ನಿಲ್ಲಿಸಬೇಕು. ಶಾಲೆಗೆ ಅಗತ್ಯವಿರುವ ಖಾಯಂ ಶಿಕ್ಷಕರನ್ನು ನೇಮಿಸಬೇಕು. ಪ್ರತಿ ಶಾಲೆಗೆ ಪರಿಚಾರಕರನ್ನು ನೇಮಿಸಿ ಕಲ್ಯಾಣ ಕರ್ನಾಟಕ ಜಿಲ್ಲೆಗಳ ಶಿಕ್ಷಕರ ನೇಮಕಾತಿಗೆ ಪ್ರತ್ಯೇಕ ಪ್ರಾಧಿಕಾರ ರಚಿಸಬೇಕು. ಬೇರೆ ಜಿಲ್ಲೆಗಳಿಗೆ ವರ್ಗಾವಣೆಯಾಗದಂತೆ ತಡೆಯಬೇಕೆಂದು ಆಗ್ರಹಿಸಿ ಹೋರಾಟ ನಡೆಸಲಾಗುತ್ತದೆ. 10 ಸಾವಿರಕ್ಕೂ ಹೆಚ್ಚು ಮಹಿಳೆಯರು ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.

ವೇದಿಕೆ ಸಂಚಾಲಕ ಸೈಯದ್ ಹಫಿಜುಲ್ಲಾ ಮಾತನಾಡಿ, ಮಕ್ಕಳ ಸಂಖ್ಯೆ ಹೆಸರಿನಲ್ಲಿ ಶಾಲೆಗಳನ್ನು ಮುಚ್ಚುವ ಸರ್ಕಾರ ಶಿಕ್ಷಕರಿಲ್ಲದ ಶಾಲೆಗಳನ್ನು ಅತಿಥಿ ಶಿಕ್ಷಕರ ಮೇಲೆ ನಡೆಸುತ್ತಿದೆ. ಗುಣಮಟ್ಟ ಶಿಕ್ಷಣ ಖಾತ್ರಿಯೇ ಇಲ್ಲದೇ ಹೋಗಿದೆ. ಅನೇಕ ಶಾಲೆಗಳಲ್ಲಿ ವಿಷಯವಾರು ಬೋಧನೆಗೂ ಅತಿಥಿ ಶಿಕ್ಷಕರು ಇಲ್ಲದೇ

ಇರುವ ಪರಸ್ಥಿತಿಯಿದೆ. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರಿಲ್ಲ. ಕಲ್ಯಾಣ ಕರ್ನಾಟಕ ಜಿಲ್ಲೆಗಳಿಗೆ 5 ಸಾವಿರ ಶಿಕ್ಷಕರನ್ನು ನೇಮಿಸುವದಾಗಿ ಹೇಳುತ್ತಿದೆ. ಸ್ಥಳೀಯರಿಗೆ ಅವಕಾಶ ನೀಡದೇ ಹೋದರೆ ಮತ್ತೆ ಹಳೆ ಸಮಸ್ಯೆಯೇ ಸೃಷ್ಟಿಯಾಗಿ ಶಿಕ್ಷಕರಿಲ್ಲದಂತಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಶಿವರಾಮರೆಡ್ಡಿ, ರಾಧಾ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News