ರಾಯಚೂರು: ಭಗತ್ ಸಿಂಗ್ ಜನ್ಮ ದಿನ ಆಚರಣೆ
ರಾಯಚೂರು: ನಗರದ ಸ್ಟೇಷನ್ ರಸ್ತೆಯ ಸಾರ್ವಜನಿಕ ಉದ್ಯಾನವನದಲ್ಲಿ ಇಂದು ರಾಯಚೂರು ವಾಕಿಂಗ್ ಕ್ಲಬ್ ಮತ್ತು ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಒ) ವತಿಯಿಂದ ಭಗತ್ ಸಿಂಗ್ ಅವರ 119ನೇ ಜನ್ಮ ದಿನವನ್ನು ಆಚರಿಸಲಾಯಿತು.
ಮೊದಲಿಗೆ ಭಗತ್ ಸಿಂಗ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಎಐಡಿವೈಒ ಜಿಲ್ಲಾ ಅಧ್ಯಕ್ಷರಾದ ಚನ್ನಬಸವ ಜಾನೇಕಲ್, ವಾಕಿಂಗ್ ಕ್ಲಬ್ ನ ಸಿದ್ದೇಶ್ ಗು. ವಿರಕ್ತಮಠ ಅವರು ಸಂದರ್ಭೋಚಿತವಾಗಿ ಮಾತನಾಡಿದರು.
ರಾಯಚೂರು ವಾಕಿಂಗ್ ಕ್ಲಬ್ ನ ಪದಾಧಿಕಾರಿಗಳಾದ ವಿ.ಲಕ್ಷ್ಮಿ ರೆಡ್ಡಿ, ಸಿದ್ದೇಶ್ ವಿರಕ್ತಿ ಮಠ, ಮುತ್ತುರಾಜ್, ಶರಣಬಸವ, ನರಸಿಂಹಲು, ಜಲಾಲುದ್ದೀನ್, ಬಸವರಾಜ ರೆಡ್ಡಿ, ಜಾಕಿರ್ ಹುಸೇನ್, ರಾಜೇಶ್, ಚಂದ್ರು, ಮುನಿಸ್ವಾಮಿ, ಸುರೇಶ್ ರಹೀಮ್, ಬಸವರಾಜ್ ವೀರೇಶ ರೆಡ್ಡಿ, ಲಕ್ಷ್ಮಣ್, ಮುನಿರೆಡ್ಡಿ, ಅಜರ ಹುಸೇನ್ ಮುಂತಾದವರು ಭಾಗವಹಿಸಿದ್ದರು.