ರಾಯಚೂರು: ರಾಯಚೂರು ತಾಲೂಕಿನ ಬಿಜನಗೇರಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿಬಿಜಿರಾಮ್‌ಜಿ ಯೋಜನೆಯಡಿ ಕೆಲಸ ಮಾಡಿದ ಕೂಲಿಕಾರ್ಮಿಕರಿಗೆ ಕಡಿಮೆ ಕೂಲಿ ಹಣ ನೀಡಿದ್ದು,ತಾಂತ್ರಿಕ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಪಂಚಾಯತ್‌ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಕೂಲಿಕಾರರಿಗೆ ಸರ್ಕಾರದ ನಿಯಮದಂತೆ 380ರೂ. ಬದಲು ದಿನಕ್ಕೆ ಕೇವಲ 250 ಪಾವತಿಸಿದ್ದಾರೆ ಎಂದು ಆರೋಪಿಸಿದರು. ಕಾಮಗಾರಿ ನಡೆಯುವ ಸ್ಥಳಕ್ಕೆ ತೆರಳಲು ಕೂಲಿಕಾರ್ಮಿಕರು ಪ್ರತಿದಿನ ಸುಮಾರು 50 ಆಟೋ ಬಾಡಿಗೆ ವೆಚ್ಚ ನೀಡಬೇಕಾಗುತ್ತದೆ. ಹೀಗಾಗಿ 250 ಕೂಲಿಯಲ್ಲಿ ಪ್ರಯಾಣ ವೆಚ್ಚ ಕಡಿತಗೊಳಿಸಿದರೆ ಕೇವಲ 200 ಉಳಿಯುತ್ತದೆ. ಈ ಮೊತ್ತದಲ್ಲಿ ಕುಟುಂಬ ನಿರ್ವಹಣೆ ಮಾಡುವುದು ಹೇಗೆ ಸಾಧ್ಯ ಎಂದು ಕೂಲಿಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದರು.

ಪಿಡಿಒಗಳು ಕಾಮಗಾರಿ ನಡೆಯುವ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸದೆ, ತಾಂತ್ರಿಕ ಅಭಿಯಂತರರ ಮಾತಿನಂತೆ ನಡೆದುಕೊಳ್ಳುತ್ತಿದ್ದಾರೆ. ಸರಕಾರದ ನಿಯಮದಂತೆ ಕೂಲಿ ಪಾವತಿಸದೆ ಕಾರ್ಮಿಕರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ದೂರಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor