×
Ad

ರಾಯಚೂರು | ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚಲು ಆಗ್ರಹಿಸಿ ಸಿಪಿಐಎಂ (ಲಿಬರೇಶನ್) ಕಾರ್ಯಕರ್ತರ ಪ್ರತಿಭಟನೆ

Update: 2025-07-23 19:52 IST

ರಾಯಚೂರು: ನಗರದ ಆಶಾಪೂರು ಮುಖ್ಯ ರಸ್ತೆ, ಸೇರಿದಂತೆ ಪ್ರಮುಖ ರಸ್ತೆಗಳು ಹಾಗೂ ಬಡಾವಣೆಗಳಲ್ಲಿನ ರಸ್ತೆಗಳಲ್ಲಿ ತಗ್ಗು, ಗುಂಡಿಗಳಿಂದ ವಾಹನ ಸಂಚಾರಕ್ಕೆ ತೊಂದರೆಯಾಗಿದ್ದು, ಕೂಡಲೇ ರಸ್ತೆಗಳನ್ನು ದುರಸ್ತಿಗೊಳಿಸಲು ಆಗ್ರಹಿಸಿ ಸಿಪಿಐಎಂಎಲ್ ಲಿಬರೇಶನ್ ಪಕ್ಷದ ಕಾರ್ಯಕರ್ತರು ಆಶಾಪೂರ ರಸ್ತೆಯಲ್ಲಿ ಕುಳಿತು ಬುಧವಾರ ಪ್ರತಿಭಟನೆ ನಡೆಸಿದರು.

ರಾಯಚೂರು ಮಹಾನಗರ ಪಾಲಿಕೆ ಹೆಸರಿನಲ್ಲಿ ಬಂದಿರುವ ಸಾವಿರಾರು ಕೋಟಿ ರೂ. ಹಣ ವ್ಯರ್ಥವಾಗಿದ್ದು, ನಗರವನ್ನು ಪ್ರವೇಶಿಸುವ ಮುಖ್ಯರಸ್ತೆಯನ್ನೇ ನಿರ್ಲಕ್ಷಿಸಲಾಗಿದೆ. ಸಾಲು ಸಾಲು ಗುಂಡಿಗಳಿಂದ ಅಪಘಾತಗಳಿಗೂ ಕಾರಣವಾಗುತ್ತಿವೆ. ಅನಾಹುತಗಳಾದರೆ ಪಾಲಿಕೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಮಹಾನಗರ ಪಾಲಿಕೆಯ ವ್ಯಾಪ್ತಿಯ ರಸ್ತೆ ದುರಸ್ತಿಗೆ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ನಗರ ಶಾಸಕರು, ಮಹಾನಗರ ಪಾಲಿಕೆ ಮುಂದಾಗಬೇಕು ಇಲ್ಲವಾದರೆ ಪಕ್ಷದಿಂದ ಮುಂದಿನ ದಿನಗಳಲ್ಲಿ ತೀವ್ರವಾದ ಹೋರಾಟ ನಡೆಸಲಾಗುವುದು ಎಂದು ಪ್ರತಿಭಟನಾನಿರತರು ಎಚ್ಚರಿಸಿದರು.

ಈ ವೇಳೆ ಪಕ್ಷದ ಜಿಲ್ಲಾ ಮುಖಂಡರಾದ ಅಜೀಜ್ ಜಾಗೀರದಾರ್, ಹನೀಫ್ ಅಬಕಾರಿ, ಜಿಲಾನ್ ಯರಗೇರಾ, ಮಹೇಂದ್ರ, ಮುಹಮ್ಮದ್‌ ಶಾಲಂ, ದೇವಪ್ಪ, ಹನುಮಂತ ಇತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News