ರಾಯಚೂರು: 2024-25ನೇ ಸಾಲಿನ ವಿಧಾನಪರಿಷತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಮೀಸಲಿಟ್ಟ ಅನುದಾನದಲ್ಲಿ ವಿಶೇಷ ಚೇತನ ಫಲಾನುಭವಿಗಳಿಗೆ ವಿವಿಧ ಬಗೆಯ ಸಾಧನ ಸಲಕರಣೆಗಳನ್ನು ವಿಧಾನಪರಿಷತ್ ಸದಸ್ಯ ವಸಂತಕುಮಾರ್ ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ವಸಂತಕುಮಾರ್, ವಿಶೇಷ ಚೇತನರಿಗೆ ವಿತರಿಸಲಾಗಿರುವ ಸಾಧನ ಸಲಕರಣೆಗಳು ದೈನಂದಿನ ಕೆಲಸ ಕಾರ್ಯಗಳನ್ನು ಸುಲಭವಾಗಿ ನಿರ್ವಹಿಸಲು ಅನುಕೂಲವಾಗಲಿವೆ. ಇವುಗಳಿಂದ ನೂರಾರು ಫಲಾನುಭವಿಗಳಿಗೆ ಪ್ರಯೋಜನವಾಗಲಿದೆ. ಬ್ರೈಲ್ ಮಡಚುವ ಕೋಲು ಸ್ವೀಕರಿಸಿದ ಅಂಧ ವಿದ್ಯಾರ್ಥಿಗಳು ಹೃದಯತುಂಬಿ ಧನ್ಯವಾದ ಅರ್ಪಿಸಿದರು ಎಂದು ತಿಳಿಸಿದರು.

ನಡೆಯಲು ಸಾಧ್ಯವಾಗದವರಿಗೆ ಗಾಲಿಕುರ್ಚಿ, ಶ್ರವಣ ಸಾಧನ, ಊರುಗೋಲು, ವಾಕಿಂಗ್ ಸ್ಟಿಕ್, ವಾಟರ್ ಬೆಡ್ ಸೇರಿದಂತೆ ವಿವಿಧ ಸಾಧನಗಳನ್ನು ವಿತರಿಸಲಾಯಿತು. ಫಲಾನುಭವಿಗಳು ಈ ಸಾಧನಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಡಾ.ರಝಾಕ್ ಉಸ್ತಾದ್, ರಾಮಕೃಷ್ಣ ನಾಯಕ್, ಅಸ್ಲಂ ಪಾಶಾ, ಜೆ. ಅಂಜನ್ ಕುಮಾರ್, ಜೆ. ಮಾರಪ್ಪ, ಶ್ರೀನಿವಾಸ್ ಶಿಂದೆ, ಮುರಳಿ ಯಾದವ, ತಲಾಕಾಯಿ ಮಾರಪ್ಪ, ಜೆ. ಸತ್ಯನಾಥ್, ಕೆ. ಮಹಾದೇವ, ಆರ್. ಹನುಮಂತ್, ಸಿ. ನಾಗರಾಜ್, ಬಾಬು ಭಂಡಾರಿ, ಪಿ. ಆಶಣ್ಣ, ಬಿ. ಗೋವಿಂದ, ಎಂ. ನರಸೀಮುಲು, ಎಸ್. ಮಲ್ಲಿಕಾರ್ಜುನ, ಎಸ್. ವೆಂಕಟೇಶ್, ಜೆ. ಬೋಳಬಂಡಿ, ಜೆ. ಊರಕುಂದ, ಈಶಪ್ಪ ಬೋಳಮನದೊಡ್ಡಿ, ಎಂ. ರಘುನಾಥ್, ಟಿ. ವೀರೇಶ್, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಸರಸ್ವತಿ, ವಿನಯಕುಮಾರ್, ರಮೇಶ್ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಬಾವಸಲಿ ರಾಯಚೂರು/ವಾರ್ತಾಭಾರತಿ

ರಾಯಚೂರು ಜಿಲ್ಲಾ ವರದಿಗಾರರು

ಬಾವಸಲಿ ಅವರು 2013ರಲ್ಲಿ ಪತ್ರಿಕೋದ್ಯಮ ವಿಷಯದಲ್ಲಿ ಬಿ.ಎ ಪದವಿ ಹಾಗೂ 2017ರಲ್ಲಿ ಎಂ.ಎ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕಳೆದ ಒಂಬತ್ತು ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು, ಪ್ರಾದೇಶಿಕ ಹಾಗೂ ರಾಜ್ಯಮಟ್ಟದ ಪ್ರತಿಷ್ಠಿತ ಪತ್ರಿಕೆಗಳು, ವೆಬ್‌ಸೈಟ್‌ಗಳು ಮತ್ತು ವೆಬ್ ಪೋರ್ಟಲ್‌ಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಪ್ರಸ್ತುತ ವಾರ್ತಾಭಾರತಿಯಲ್ಲಿ ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ