×
Ad

Sindhanur | ಅಪರಿಚಿತ ವಾಹನ ಢಿಕ್ಕಿ: ಕುರಿಗಾಯಿ ಸ್ಥಳದಲ್ಲೇ ಮೃತ್ಯು

Update: 2026-06-18 14:33 IST

ಶರಣಬಸವ 

ಸಿಂಧನೂರು : ಅಪರಿಚಿತ ವಾಹನವೊಂದು ಢಿಕ್ಕಿ ಹೊಡೆದು ಕುರಿಗಾಯಿಯೊರ್ವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಗುರುವಾರ ಬೆಳಗಿನ ಜಾವ ನಗರದ ಗಂಗಾವತಿ ಮುಖ್ಯರಸ್ತೆ ಬಳಿ ನಡೆದಿದೆ.

ಮೃತರನ್ನು ಮಸ್ಕಿ ತಾಲ್ಲೂಕಿನ ತುಪ್ಪದೂರು ಗ್ರಾಮದ ಕುರಿಗಾಯಿ ಶರಣಬಸವ (30) ಎಂದು ಗುರುತಿಸಲಾಗಿದೆ.

ಶರಣಬಸವ ತನ್ನ ಕುರಿಗಳೊಂದಿಗೆ ಗಂಗಾವತಿ ಮುಖ್ಯ ರಸ್ತೆ ಮೂಲಕ ಸಾಸಲಮರಿ ಕಡೆಗೆ ಸಂಚರಿಸುವ ವೇಳೆ ಅಪರಿಚಿತ ವಾಹನ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಢಿಕ್ಕಿಯ ತೀವ್ರತೆಗೆ  ಶರಣಬಸವ ಸೇರಿ ಮೂರು ಕುರಿಗಳು ಸ್ಥಳದಲ್ಲೇ ಮೃತಪಟ್ಟಿದೆ ಎಂದು ತಿಳಿದು ಬಂದಿದೆ.

ಈ ಕುರಿತು ಸಂಚಾರಿ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News